Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಮಾದಕ ವಸ್ತುಗಳಿಂದ ದೂರವಿರಲು ಸಲಹೆ

ಮಾದಕ ವಸ್ತುಗಳಿಂದ ದೂರವಿರಲು ಸಲಹೆ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ ಅಗದತಂತ್ರ ಸ್ನಾತಕೋತ್ತರ ವಿಭಾಗ ವತಿಯಿಂದ ದ್ವಿತೀಯ ಅತಿಥಿ ಉಪನ್ಯಾಸ ಕಾರ್ಯಕ್ರಮದಡಿ ಮಣಿಪಾಲ ಕೆಎಂಸಿ ಡಿಪಾರ್ಟ್ಮೆಂಟ್ ಆಫ್ ಫೊರೆನ್ಸಿಕ್ ಸೈಯನ್ಸ್ ಆ್ಯಂಡ್ ಟೆಕ್ನಾಲಜಿ ಸಹಾಯಕ ಪ್ರಾಧ್ಯಾಪಕ ಡಾ. ನಿರ್ಮಲ್ ಕೃಷ್ಣನ್ ಎಂ., ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಉಪನ್ಯಾಸ ನೀಡಿದರು.

ಮಾನಸಿಕ ಹಾಗೂ ಶಾರೀರಿಕ ಆರೋಗ್ಯ ಹದೆಗೆಡಿಸುವ ಔಷಧಿಗಳು ಮತ್ತು ಮಾದಕ ವಸ್ತುಗಳ ಪರಿಣಾಮಗಳ ಬಗ್ಗೆ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿವರಿಸಿದರು. ಅಂಥ ದ್ರವ್ಯಗಳಿಂದ ಆಗಬಹುದಾದ ಸಮಾಜಘಾತಕ ಅಪರಾಧಗಳ ಬಗ್ಗೆಯೂ ತಿಳಿಸಿ, ಅವುಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ| ಸುಚೇತಾಕುಮಾರಿ, ಯಾವುದೇ ದ್ರವ್ಯ ಸೇವನೆಗೆ ಮುನ್ನ ಅದರ ಸಂಫೂರ್ಣ ಮಾಹಿತಿ ತಿಳಿದಿರಬೇಕು. ತಂಬಾಕು, ಮದ್ಯಪಾನ ಇನ್ನಿತರ ಹಾನಿಕಾರಕ ದ್ರವ್ಯ ಬಳಸದೇ ವಿದ್ಯಾರ್ಥಿ ಜೀವನವನ್ನು ಬುದ್ಧಿವಂತಿಕೆಯಿಂದ ರೂಪಿಸಿಕೊಳ್ಳಬೇಕು ಎಂದರು.

ಪ್ರಾಧ್ಯಾಪಕರಾದ ಡಾ. ಶ್ರೀನಿಧಿ ಆರ್., ಡಾ. ನೀರಜ್ ಎ. ಕೆ. ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ರೇವತಿ ವಿ. ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಅನನ್ಯ ಬಿ. ನಿರೂಪಿಸಿದರು. ಕೆ.ಎಂ.ಸಿ.ಯ ಡಾ. ಅಂಕುರ್ ಚೌಧರಿ ಮತ್ತು ಎಸ್ಡಿಎಂ ಆಯುರ್ವೇದ ಕಾಲೇಜಿನ ಡಾ. ರಾಜಲಕ್ಷ್ಮೀ. ಡಾ. ಚೈತ್ರಾ ಹೆಬ್ಬಾರ್, ಡಾ. ರವಿಕೃಷ್ಣ ಎಸ್., ಡಾ. ಶ್ರೀಜಿತ್ ಕೆ., ಡಾ. ಧನೇಶ್ವರಿ, ಡಾ. ಸರಿತಾ, ಡಾ. ಇನೋಶ್, ಡಾ. ರೇಖಾ ಪಾಟಿಲ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!