Thursday, July 7, 2022
Home ಸಮಾಚಾರ ಸಂಘಸಂಗತಿ ಸಾಲಿಡಾರಿಟಿ ಯೂತ್ ಮೂಮ್ ಮೆಂಟ್ ಗೆ ಆಯ್ಕೆ

ಸಾಲಿಡಾರಿಟಿ ಯೂತ್ ಮೂಮ್ ಮೆಂಟ್ ಗೆ ಆಯ್ಕೆ

ಸಾಲಿಡಾರಿಟಿ ಯೂತ್ ಮೂಮ್ ಮೆಂಟ್ ಗೆ ಆಯ್ಕೆ

ಉಡುಪಿ: ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಉಡುಪಿ ಜಿಲ್ಲಾ ನೂತನ ಪದಾಧಿಕಾರಿಗಳ ಆಯ್ಕೆ ರಾಜ್ಯಾಧ್ಯಕ್ಷ ಲಬೀದ್ ಶಾಫಿ ನೇತೃತ್ವದಲ್ಲಿ ಸಾಲಿಹಾತ್ ಸಭಾಂಗಣದಲ್ಲಿ ನಡೆಯಿತು.

ಸಾಲಿಡಾರಿಟಿ ಯೂತ್ ಮೂವ್ ಮೆಂಟ್ ಉಡುಪಿ ಜಿಲ್ಲಾಧ್ಯಕ್ಷರಾಗಿ ಯಾಸೀನ್ ಕೋಡಿಬೆಂಗ್ರೆ ಹಾಗೂ ಕಾರ್ಯದರ್ಶಿಯಾಗಿ ನಬೀಲ್ ಗುಜ್ಜರಬೆಟ್ಟು ಆಯ್ಕೆಯಾದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಶುಐಬ್ ಮಲ್ಪೆ, ಜನ ಸಂಪರ್ಕ ಮತ್ತು ಮಾಧ್ಯಮ ಕಾರ್ಯದರ್ಶಿ ಇಬ್ರಾಹಿಮ್ ಸಯೀದ್ ಮತ್ತು ಜೊತೆ ಕಾರ್ಯದರ್ಶಿಯಾಗಿ ಅಕ್ರಮ್ ಹೂಡೆ ಆಯ್ಕೆಯಾದರು.

ಕುಂದಾಪುರ ಮತ್ತು ಬೈಂದೂರು ತಾಲೂಕು ಮೇಲ್ವಿಚಾರಕಾಗಿ ಹಸನ್ ಮಾವಾಡ್ ಮತ್ತು ಕಾಪು ತಾಲೂಕಿನ ಮೇಲ್ವಿಚಾರಕರಾಗಿ ರಂಝಾನ್ ಕಾಪು ಆಯ್ಕೆಯಾಗಿದ್ದಾರೆ.

ಹೂಡೆ ಘಟಕ ಅಧ್ಯಕ್ಷ ಜಾಬೀರ್ ಕಿದೆವರ್, ಮಲ್ಪೆ ಘಟಕ ಅಧ್ಯಕ್ಷರಾಗಿ ಶುಐಬ್ ಮಲ್ಪೆ, ಉಡುಪಿ ಘಟಕಾಧ್ಯಕ್ಷರಾಗಿ ಇಫ್ತಿಕಾರ್ ಉಡುಪಿ, ಗುಜ್ಜರಬೆಟ್ಟು ಉಸ್ತುವಾರಿಯಾಗಿ ರೋಶನ್ ಝಮೀರ್, ಕಾಪು ಘಟಕಾಧ್ಯಕ್ಷರಾಗಿ ಸದಾಫ್ ಕಾಪು ಪುನರಾಯ್ಕೆಯಾದರು.

ಈ ಸಂದರ್ಭದಲ್ಲಿ 20 ಮಂದಿ ಸದಸ್ಯರ ಜಿಲ್ಲಾ ಕಾರ್ಯಕಾರಿಣಿ ರಚಿಸಲಾಯಿತು.

ಪ್ರೊ. ಅಬ್ದುಲ್ ಅಝೀಜ್, ಅಬ್ದುಲ್ ಖಾದೀರ್ ಮೊಯ್ದಿನ್ ಮತ್ತು ಶಬ್ಬೀರ್ ಮಲ್ಪೆ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!