Monday, July 4, 2022
Home ಸಮಾಚಾರ ರಾಜ್ಯ ವಾರ್ತೆ `ಶೀರೂರು ಶ್ರೀಪಾದರಿಂದ ತೆರಿಗೆ ವಂಚನೆಯಾಗಿಲ್ಲ'

`ಶೀರೂರು ಶ್ರೀಪಾದರಿಂದ ತೆರಿಗೆ ವಂಚನೆಯಾಗಿಲ್ಲ’

ಉಡುಪಿ: ಹರಿಪಾದವನ್ನೈದ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಕೋಟ್ಯಂತರ ರೂ. ಆದಾಯ ತೆರಿಗೆ ಬಾಕಿ ಇಟ್ಟಿದ್ದಾರೆ ಎಂದು ಸೋದೆ ಮತ್ತು ಪಲಿಮಾರು ಶ್ರೀಪಾದರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪ ಸತ್ಯಕ್ಕೆ ದೂರವಾದ ವಿಷಯ ಎಂದು ಶೀರೂರು ಮಠದ ಭಕ್ತ ಸಮಿತಿ ಹೇಳಿದೆ.

ಪತ್ರಿಕಾ ಪ್ರಕಟಣೆ ನೀಡಿರುವ ಭಕ್ತ ಸಮಿತಿ, ಶೀರೂರು ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಆಡಳಿತ ಅವಧಿಯಲ್ಲಿ 2017- 18ರ ವರೆಗೆ ಎಲ್ಲಾ ತೆರಿಗೆ ಪಾವತಿಯ ವಿವರ ಮತ್ತು ಪ್ರತಿಗಳು ಲಭ್ಯವಿದೆ.ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಜಾರಿಯಾಗಿ ಅದನ್ನು ಒಪ್ಪದಿದ್ದರೆ ಅದರ ಖಚಿತತೆ ಪ್ರಶ್ನಿಸುವುದು ಎಲ್ಲಾ ಸಂಸ್ಥೆಗಳ ಸಹಜ ಪ್ರಕ್ರಿಯೆ ಆಗಿದೆ.

ಆದಾಯ ತೆರಿಗೆ ಇಲಾಖೆಯವರು ನೋಟಿಸ್ ಜಾರಿ ಮಾಡಿದ ಕೂಡಲೇ ಮಠದ ಆದಾಯ ಮಾಧ್ಯಮಗಳ ಮೂಲಕ ಬಹಿರಂಗಗೊಳಿಸುವುದು ದುರುದ್ದೇಶಪೂರಿತವಾಗಿದ್ದು, ಅಸಮಂಜಸ ಹಾಗೂ ಕಾನೂನುಬಾಹಿರವಾಗಿದೆ.

ಇದು ಶೀರೂರು ಮಠದ ಅನುಯಾಯಿಗಳು, ಭಕ್ತರು ಹಾಗೂ ಸಮಾಜಕ್ಕೆ ನೋವನ್ನುಂಟುಮಾಡಿದೆ. ಈ ಕುರಿತು ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿರುವುದಾಗಿ ಶೀರೂರು ಮಠದ ಭಕ್ತ ಸಮಿತಿಯ ಕೇಮಾರು ಶ್ರೀ ಈಶವಿಠಲ ಸ್ವಾಮೀಜಿ, ಲಾತವ್ಯ ಆಚಾರ್ಯ ಮೊದಲಾದವರು ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!