ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 19
ಮಿಲಾಗ್ರಿಸ್ ಕಾಲೇಜಿಗೆ ಸಿನಿ ಶೆಟ್ಟಿ ಭೇಟಿ
ಬ್ರಹ್ಮಾವರ: ಫೆಮಿನಾ ಮಿಸ್ ಇಂಡಿಯಾ ಖ್ಯಾತಿಯ ಸಿನಿ ಶೆಟ್ಟಿ ಮಂಗಳವಾರ ತನ್ನ ಹುಟ್ಟೂರಿಗೆ ಆಗಮಿಸಿದ ಸಂದರ್ಭದಲ್ಲಿ, ತನ್ನ ತಾಯಿ ಹೇಮಾ ಶೆಟ್ಟಿ ಕಲಿತ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿಗೆ ಭೇಟಿ ನೀಡಿದರು.
ಅವರೊಂದಿಗೆ ತಂದೆ ಸದಾನಂದ ಶೆಟ್ಟಿ, ತಾಯಿ ಹೇಮಾ ಶೆಟ್ಟಿ ಇದ್ದರು.
ಕಾಲೇಜು ಪ್ರಾಂಶುಪಾಲ ಡಾ| ವಿನ್ಸೆಂಟ್ ಆಳ್ವ, ಭಾಷಾ ನಿಕಾಯ ಡೀನ್ ಪ್ರೋ. ಸೋಫಿಯಾ ಡಯಾಸ್, ವಾಣಿಜ್ಯ ವಿಭಾಗ ಡೀನ್ ಶಾಲೆಟ್ ಮಿಸ್ ಇಂಡಿಯಾ ಸಿನಿ ಶೆಟ್ಟಿ ಅವರನ್ನು ಗೌರವಿಸಿದರು.
ಈ ಸಂದರ್ಭದಲ್ಲಿ ಹೇಮಾ ಸದಾನಂದ ಶೆಟ್ಟಿ ತನ್ನ ಕಾಲೇಜು ದಿನಗಳನ್ನು ನೆನಪಿಸಿಕೊಂಡರು.
ಸಿನಿ ಶೆಟ್ಟಿ, ಇದೊಂದು ನನಗೆ ಒದಗಿದ ಅಪೂರ್ವ ಅವಕಾಶ. ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿ ಮಾರ್ಗದರ್ಶನ ಮಾಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಎಂದರು.
ಐಕ್ಯೂಎಸಿ ಸಂಚಾಲಕ ಡಾ| ಜಯರಾಮ್ ಶೆಟ್ಟಿಗಾರ್ ಮಾತನಾಡಿ, ಹೇಮಾ ಶೆಟ್ಟಿ ವಿದ್ಯಾರ್ಥಿ ಜೀವನದಲ್ಲಿ ಕಾಲೇಜಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಕಾಲೇಜು ಡೇ, ಸಾಂಸ್ಕೃತಿಕ ಪ್ರದರ್ಶನ ಮುಂತಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದುದನ್ನು ಮತ್ತು ತಾಯಿಯ ಸಾಂಸ್ಕೃತಿಕ ಪರಂಪರೆಯನ್ನು ಮಗಳು ಮುಂದುವರಿಸುತ್ತಿರುವುದು ಸಂತಸದ ಸಂಗತಿ ಎಂದರು.