ಸುದ್ದಿಕಿರಣ ವರದಿ
ಮಂಗಳವಾರ, ಮೇ 24
ಎಸ್.ಎಸ್.ಎಲ್.ಸಿ ಸಾಧಕಗೆ ಸನ್ಮಾನ
ಮಲ್ಪೆ: ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಅಂಕ ಪಡೆದ ಇಲ್ಲಿನ ಪುನೀತ್ ನಾಯ್ಕ್ ಅವರಿಗೆ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (ಎಸ್.ಐ.ಓ.) ಮಲ್ಪೆ ಘಟಕ ವತಿಯಿಂದ ಸನ್ಮಾನಿಸಲಾಯಿತು.
ನಿರಂತರ ಪರಿಶ್ರಮ, ಶ್ರದ್ಧೆ, ಆಸಕ್ತಿ ಮತ್ತು ಅಧ್ಯಯನದಿಂದ ಇಷ್ಟು ಅಂಕ ಪಡೆಯಲು ಸಾಧ್ಯವಾಯಿತು ಎಂದು ಪುನೀತ್ ತಿಳಿಸಿದರು.
ಮಲ್ಪೆ ಬಂದರಿನಲ್ಲಿ ಕೆಲಸದ ಜೊತೆ ಜೊತೆಯಲ್ಲಿ ವಿದ್ಯಾಭ್ಯಾಸ ಮಾಡಿ ಅಂಕ ಪಡೆದ ಪುನೀತ್ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತದೆ ಎಂದು ಎಸ್.ಐ.ಓ ಮಲ್ಪೆ ಘಟಕ ಅಧ್ಯಕ್ಷ ಶೇಖ್ ಅಯಾನ್ ತಿಳಿಸಿದರು.
ಈ ಸಂದರ್ಭದಲ್ಲಿ ಎಸ್.ಐ.ಓ ಮಲ್ಪೆ ಘಟಕ ಕಾರ್ಯದರ್ಶಿಗಳಾದ ನೌಫಲ್ ಅಹಮದ್ ಮತ್ತು ನೌಮನ್, ಕಾರ್ಯಕರ್ತರಾದ ಅಜ್ಮಲ್ ಮತ್ತು ಸಫಾನ್ ಇದ್ದರು