Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ `ಉಯ್ಯಾಲೆಯಲ್ಲಿ ರುಕ್ಷಿಣಿ'ಯಾದ ಉಡುಪಿ ಶ್ರೀಕೃಷ್ಣ

`ಉಯ್ಯಾಲೆಯಲ್ಲಿ ರುಕ್ಷಿಣಿ’ಯಾದ ಉಡುಪಿ ಶ್ರೀಕೃಷ್ಣ

`ಉಯ್ಯಾಲೆಯಲ್ಲಿ ರುಕ್ಷಿಣಿ’ಯಾದ ಉಡುಪಿ ಶ್ರೀಕೃಷ್ಣ
(ಸುದ್ದಿಕಿರಣ ವರದಿ)

ಉಡುಪಿ: ಶರನ್ನವರಾತ್ರಿಯ ಎರಡನೇ ದಿನವಾದ ಶುಕ್ರವಾರದಂದು ಉಡುಪಿ ಶ್ರೀಕೃಷ್ಣನಿಗೆ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಉಯ್ಯಾಲೆಯಲ್ಲಿ ರುಕ್ಮಿಣೀ ಅಲಂಕಾರ ಮಾಡಿದರು.
ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮಹಾಪೂಜೆ ನೆರವೇರಿಸಿದರು.

ಉಪನ್ಯಾಸ
ಭಗವದ್ಭಕ್ತರಿಗೆ ಸಂದೇಶ ನೀಡುವ ನಿಟ್ಟಿನಲ್ಲಿ ಆಯೋಜಿಸಲಾದ ಧಾರ್ಮಿಕ ಉಪನ್ಯಾಸ ಅಂಗವಾಗಿ ಶುಕ್ರವಾರ ದಕ್ಷಿಣ ಕನ್ನಡದ ಅರಸಿಯರು ಕುರಿತಂತೆ ಚೈತ್ರಾ ಕುಂದಾಪುರ ಉಪನ್ಯಾಸ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ
ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ನವರಾತ್ರಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಧಾರವಾಡದ ಸುಜಾತಾ ಗುರವ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!