Saturday, August 13, 2022
Home ಸಮಾಚಾರ ರಾಜ್ಯ ವಾರ್ತೆ ಫ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಗೆದ್ದ ಸುಮೇಧಾ ಫ್ಯಾಶನ್ ಇನ್ ಸ್ಟಿಟ್ಯೂಟ್

ಫ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಗೆದ್ದ ಸುಮೇಧಾ ಫ್ಯಾಶನ್ ಇನ್ ಸ್ಟಿಟ್ಯೂಟ್

ಸುದ್ದಿಕಿರಣ ವರದಿ
ಸೋಮವಾರ, ಜುಲೈ 4

ಫ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಗೆದ್ದ ಸುಮೇಧಾ ಫ್ಯಾಶನ್ ಇನ್ ಸ್ಟಿಟ್ಯೂಟ್
ಕಾರ್ಕಳ: ಬೆಂಗಳೂರಿನ ಕಾರ್ಪೊರೇಟ್ ವುಮೆನ್ ಆ್ಯಂಡ್ ವುಮೆನ್ ಎಂಟರ್ ಪ್ರಿನರ್ ಆಶ್ರಯದಲ್ಲಿ ಹೋಟೆಲ್ ತಿಲಕ್ ಅಶೋಕ ಸಭಾಂಗಣದಲ್ಲಿ ನಡೆದ ಬಿ ಯುವರ್ ಓನ್ ಲೇಬಲ್ ಫಾರ್ ವುಮನ್
ಕಾರ್ಪೊರೇಟ್ ಪ್ಯಾಶನ್ ವೀಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಸಾಧನ ಜಿ. ಆಶ್ರಿತ್ ನೇತೃತ್ವದ ಇಲ್ಲಿನ ಪ್ರತಿಷ್ಠಿತ ಸುಮೇಧಾ ಪ್ಯಾಶನ್ ಇನ್ ಸ್ಟಿಟ್ಯೂಟ್ ತಂಡ, ಕಾರ್ಪೊರೇಟ್ ಪ್ಯಾಶನ್ ವೀಕ್ 2022ನ ಗ್ರ್ಯಾಂಡ್ ಫಿನಾಲೆ ಮಾಡೆಲ್ ಗಳಿಗೆ ತಯಾರಿಸಿದ ನೂತನ ಬಗೆ ಬಗೆಯ ವಸ್ತ್ರವಿನ್ಯಾಸಕ್ಕಾಗಿ ವಸ್ತ್ರ ವಿನ್ಯಾಸ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದುಕೊಂಡಿದೆ.

ಕಳೆದ ವರ್ಷ ಕಿರುತೆರೆಯ ನಟಿಯರಿಗೆ ವಸ್ತ್ರ ವಿನ್ಯಾಸಕ್ಕಾಗಿ ಸುಮೇಧಾ ಪ್ಯಾಶನ್ ಇನ್ ಸ್ಟಿಟ್ಯೂಟ್ ಮಾಲಕಿ ಸಾಧನ ಜಿ. ಆಶ್ರಿತ್ ಕಿರುತೆರೆಯ ಪ್ರತಿಷ್ಠಿತ ರಾಜ್ಯ ಮಟ್ಟದ ಗೋಲ್ಡನ್ ವುಮೆನ್ ಅವಾರ್ಡ್ ತನ್ನದಾಗಿಸಿದ್ದರು.

ಈ ಬಾರಿ ತನ್ನ ನೇತೃತ್ವದ ಸುಮೇಧಾ ಪ್ಯಾಶನ್ ಇನ್ ಸ್ಟಿಟ್ಯೂಟ್ ಕಾರ್ಪೊರೇಟ್ ಪ್ಯಾಶನ್ ವೀಕ್ ಸ್ಪರ್ಧೆಯಲ್ಲಿ ವಿಜೇತರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ತಂಡದಲ್ಲಿ ಸುಮೇಧಾ ಫ್ಯಾಶನ್ ಇನ್ಸ್ಟಿಟ್ಯೂಟ್ ವಿದ್ಯಾರ್ಥಿಗಳಾದ ಚಂದನ, ಪ್ರಮೋದ, ಪಂಚಮಿ, ಜಯಂತಿ, ಸುಪ್ರಿಯಾ, ಕಾದಂಬರಿ ಶೆಟ್ಟಿ, ನವ್ಯ, ಸೌಜನ್ಯ, ಪ್ರಣಮ್ಯ, ರಶ್ಮಿ, ಶಿಲ್ಪ ಮತ್ತು ಸೌಮ್ಯ ವಸ್ತ್ರ ವಿನ್ಯಾಸದೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!