Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಮತ, ಮಠ ಬೇಧ ತೊರೆದು ಧರ್ಮ ರಕ್ಷಣೆಗೆ ಮುಂದಾಗಲು ಕರೆ

ಮತ, ಮಠ ಬೇಧ ತೊರೆದು ಧರ್ಮ ರಕ್ಷಣೆಗೆ ಮುಂದಾಗಲು ಕರೆ

ಉಡುಪಿ: ಧರ್ಮದ ರಕ್ಷಣೆ ವಿಚಾರ ಬಂದಾಗ ದೇಶದ ಎಲ್ಲಾ ಮಠಾಧೀಶರು ಮಠ, ಮತ ಬೇಧ ತೊರೆದು ಧರ್ಮ ರಕ್ಷಣೆಗೆ ಮುಂದಾಗಬೇಕು. ಅವರವರ ಸಿದ್ಧಾಂತವನ್ನು ಮಠಕ್ಕೆ ಸೀಮಿತಗೊಳಿಸಿ ಸನಾತನ ಧರ್ಮ ರಕ್ಷಣೆಗೆ ಮುಂದಾಗಬೇಕು ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಮಂಗಳವಾರ ಶ್ರೀಕೃಷ್ಣಮಠಕ್ಕಾಗಮಿಸಿದ ಮೈಸೂರು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಶಿಷ್ಯರಾದ ಶ್ರೀದತ್ತ ವಿಜಯಾನಂದ ಸ್ವಾಮೀಜಿಯವರನ್ನು ಅಭಿನಂದಿಸಿ ಮಾತನಾಡಿದರು.

ಪ್ರಪಂಚಕ್ಕೇ ಆವರಿಸಿದ ಮಹಾಮಾರಿ ಕೊರೊನಾ ಆದಷ್ಟು ಶೀಘ್ರ ನಿವಾರಣೆಯಾಗುವಂತೆ ದೇವರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಬೇಕು ಎಂದು ಆಶಿಸಿದರು.

ವಿವಿಧತೆಯಲ್ಲಿ ಏಕತೆ ಸಾರುವ ನಮ್ಮ ದೇಶದಲ್ಲಿ ಹಿಂದೂ ಧರ್ಮವನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಶ್ರೀದತ್ತ ವಿಜಯಾನಂದ ಸ್ವಾಮೀಜಿ ಹೇಳಿದರು.

ಅದಕ್ಕೂ ಮುನ್ನ ಪರ್ಯಾಯ ಶ್ರೀಪಾದರು ಶ್ರೀದತ್ತ ವಿಜಯಾನಂದ ಸ್ವಾಮೀಜಿಯವರನ್ನು ಮಠೀಯ ಸಂಪ್ರದಾಯದಂತೆ ವೇದಘೋಷ, ಮಂಗಳ ವಾದ್ಯದೊಂದಿಗೆ ಬರಮಾಡಿಕೊಂಡು, ಕನಕ ನವಗ್ರಹ ಕಿಂಡಿ ಮೂಲಕ ಕೃಷ್ಣ ದರ್ಶನ ಮಾಡಿಸಿದರು.

ಬಳಿಕ ಚಂದ್ರಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಗಳನ್ನು ಗೌರವಿಸಿದರು.

ಅದಮಾರು ಮಠ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಸ್ವಾಗತಿಸಿದರು. ಆಸ್ಥಾನ ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಆಚಾರ್ಯ ನಿರೂಪಿಸಿದರು. ಮಠದ ಪ್ರಧಾನ ವ್ಯವಸ್ಥಾಪಕ ಗೋವಿಂದರಾಜ್ ವಂದಿಸಿದರು. ಮಠದ ಪಿಆರ್.ಓ. ಶ್ರೀಶ ಭಟ್ ಕಡೆಕಾರ್ ಹಾಗೂ ಶ್ರೀಕೃಷ್ಣ ಸೇವಾ ಬಳಗದ ಸದಸ್ಯರು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!