ಸನ್ ರೈಸ್ ಓವರ್ ಅಯೋಧ್ಯಾ ಪುಸ್ತಕ ರದ್ಧತಿಗೆ ಆಗ್ರಹ
ಉಡುಪಿ, ನ. 16 (ಸುದ್ದಿಕಿರಣ ವರದಿ): ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಬರೆದಿರುವ ಸನ್ ರೈಸ್ ಓವರ್ ಅಯೋಧ್ಯಾ ಎಂಬ ಹಿಂದೂ ವಿರೋಧಿ ಪುಸ್ತಕವನ್ನು ಬಿಡುಗಡೆಗೊಳಿಸಲು ಅವಕಾಶ ನೀಡದೆ ರದ್ದುಪಡಿಸಬೇಕೆಂದು ಜಯರಾಮ್ ಅಂಬೇಕಲ್ಲು ನೇತೃತ್ವದ ರಾಮ್ ಸೇನಾ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ.
ಈ ಕುರಿತು ಕೇಂದ್ರ ಗೃಹಸಚಿವರಿಗೆ ಉಡುಪಿ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮನವಿ ಸ್ವೀಕರಿಸಿದರು.
ಜಿಲ್ಲಾಧ್ಯಕ್ಷ ಜಯರಾಮ್ ಅಂಬೇಕಲ್ಲು, ಮುಖಂಡರಾದ ಶರತ್ ಮಣಿಪಾಲ, ಸುದರ್ಶನ್ ಕಪ್ಪೆಟ್ಟು, ಸಂದೀಪ್ ಮೂಡುಬೆಳ್ಳೆ, ಗಗನ್ ಪೂಜಾರಿ, ರಾಕೇಶ್ ನಿಟ್ಟೂರು, ಹರೀಶ್ ಪೂಜಾರಿ, ನಿತಿನ್, ಈಶ್ವರ್, ವಿಕ್ರಮ್ ನಿಟ್ಟೂರು ಮುಂತಾದವರಿದ್ದರು.