Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಸುನೀತ ಡಿ'ಸೋಜ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷೆ

ಸುನೀತ ಡಿ’ಸೋಜ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷೆ

ಉಡುಪಿ: ಬಿಜೆಪಿ ಉಡುಪಿ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾ ನೂತನ ಅಧ್ಯಕ್ಷೆಯಾಗಿ ಸುನೀತ ಡಿ’ಸೋಜ ಯ್ಕೆಯಾದರು. ಬ್ರಹ್ಮಾವರ ಬಿಜೆಪಿ ಕಚೇರಿಯಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್ ಅಧ್ಯಕ್ಷತೆಯಲ್ಲಿ ಪದಗ್ರಹಣ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಲ್ವಿನ್ ಡಿ’ಸೋಜಾ ಉದ್ಘಾಟಿಸಿದರು. ಸುನೀತ ಡಿ’ಸೋಜ ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸಲಾಯಿತು.

ಅ. ಸಂ. ಮೋರ್ಚಾ ಉಪಾಧ್ಯಕ್ಷೆಯಾಗಿ ಅಶ್ವಿನಿ ರೊಲಿಟಾ, ಪ್ರಧಾನ ಕಾರ್ಯದರ್ಶಿಗಳಾಗಿ ರಾಜೇಶ್ವರಿ ಮಸ್ಕರೇನಸ್ ಮತ್ತು ಫ್ಲಾವಿಯಾ ಸುನೀತ ಡಿ’ಸೋಜ ಕೆಮ್ಮಣ್ಣು ಹಾಗೂ ಇತರ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಈ ಸಂದರ್ಭದಲ್ಲಿ ಚಿನ್ನದ ಪದಕ ವಿಜೇತ ಬಹುಮುಖ ಪ್ರತಿಭೆಗಳಾದ ಜೋಸ್ಲಿನ್ ಡಿ’ಸೋಜ (ಬಾಕ್ಸಿಂಗ್ ಪಟು) ಮತ್ತು ಜೋಯ್ಲಿನ್ ಡಿ’ಸೋಜ (ಕರಾಟೆ ಪಟು) ಅವರನ್ನು ಗೌರವಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಶೇಕ್ ಆಸೀಫ್, ಉಪಾಧ್ಯಕ್ಷ ಮಹಮ್ಮದ್ ಮುತ್ತಾಲಿ, ಗ್ರಾಮಾಂತರ ಅ. ಸಂ. ಮೋ. ಮಂಡಲ ಪ್ರಭಾರಿ ಗಿಲ್ಬರ್ಟ್ ಬ್ರಗಾಂಜ, ಜಿ. ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಗ್ರಾಮಾಂತರ ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಮಂಡಲ ಪ್ರಭಾರಿ ಸದಾನಂದ ಬಳ್ಕೂರು, ತಾ. ಪಂ. ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ತಾ. ಪಂ. ಸಾಮಾಜಿಕ ನ್ಯಾಯ ಸಮಿತಿಯ ವಸಂತಿ, ಮಹೇಂದ್ರ ಕುಮಾರ್ ನೀಲಾವರ ಮೊದಲಾದವರಿದ್ದರು.

ಬಿಜೆಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!