Monday, August 15, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಬದರಿಯಲ್ಲಿ ಮಧ್ವಮೂರ್ತಿ ಸ್ಥಾಪನೆಗೆ ನೆರವಿನ ಭರವಸೆ

ಬದರಿಯಲ್ಲಿ ಮಧ್ವಮೂರ್ತಿ ಸ್ಥಾಪನೆಗೆ ನೆರವಿನ ಭರವಸೆ

ಸುದ್ದಿಕಿರಣ ವರದಿ
ಶನಿವಾರ, ಜುಲೈ 23

ಬದರಿಯಲ್ಲಿ ಮಧ್ವಮೂರ್ತಿ ಸ್ಥಾಪನೆಗೆ ನೆರವಿನ ಭರವಸೆ
ಉಡುಪಿ: ದ್ವೈತ ಮತ ಸಂಸ್ಥಾಪಕ ಆಚಾರ್ಯ ಮಧ್ವರ ಶಿಲಾಮೂರ್ತಿಯನ್ನು ಪ್ರಸಿದ್ಧ ಕ್ಷೇತ್ರ ಬದರಿಯಲ್ಲಿ ಸ್ಥಾಪಿಸಲು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂಕಲ್ಪಿಸಿದ್ದು, ಆ ಮಹಾಕಾರ್ಯಕ್ಕೆ ಪೂರಕ ಸಹಕಾರ ನೀಡುವುದಾಗಿ ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಕಿಶನ್ ರೆಡ್ಡಿ ಭರವಸೆ ನೀಡಿದರು.

ಹೈದರಾಬಾದ್ ನಲ್ಲಿ ಚಾತುರ್ಮಾಸ್ಯ ವ್ರತ ದೀಕ್ಷೆಯಲ್ಲಿರುವ ಪೇಜಾವರ ಶ್ರೀಪಾದರನ್ನು ಶನಿವಾರ ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವ ಕಿಶನ್ ರೆಡ್ಡಿ ಭೇಟಿ ಮಾಡಿ, ಶ್ರೀಗಳಿಗೆ ಗೌರವ ಸಮರ್ಪಿಸಿದರು.

ರೆಡ್ಡಿ ಪತ್ನಿಯೂ ಜೊತೆಗಿದ್ದರು.

ಮಧ್ವ ಮೂರ್ತಿ ಸ್ಥಾಪನೆ ಬಗೆಗಿನ ಯೋಜನೆ ರೂಪಿಸಲು ಸಲಹೆ ನೀಡಿದ ಸಚಿವ ಕಿಶನ್ ರೆಡ್ಡಿ, ಪೂರ್ಣ ಸಹಕಾರದ ಭರವಸೆ ನೀಡಿದರು.

ಸ್ವಾತಂತ್ರ್ಯ ಅಮೃತೋತ್ಸವ ಸಂದರ್ಭದಲ್ಲಿ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದ್ದು, ಅದರಲ್ಲಿ ಜನತೆ ಭಾಗವಹಿಸುವಂತೆ ಶ್ರೀಗಳ ಸಹಿತ ಎಲ್ಲಾ ಮಠಾಧೀಶರೂ ಕರೆಕೊಡುವಂತೆ ಸಚಿವ ರೆಡ್ಡಿ ವಿನಂತಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!