Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ: ಸೊರಕೆ

ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ: ಸೊರಕೆ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 1

ಪೌರ ಕಾರ್ಮಿಕರ ಹೋರಾಟಕ್ಕೆ ಬೆಂಬಲ: ಸೊರಕೆ
ಮಣಿಪಾಲ: ರಾಜ್ಯದ ನಗರಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್, ಹೊರಗುತ್ತಿಗೆ ನೌಕರರ ಸಂಘ (ವಾಹನ ಚಾಲಕರು, ವಾಟರ್ ಮೆನ್, ಲೋಡರ್ಸ್, ಕ್ಲೀನರ್ಸ್, ಯುಜಿಡಿ ಕಾರ್ಮಿಕರು, ಹೆಲ್ಪರ್ಸ್, ಡಾಟಾ ಆಪರೇಟರ್ ಗಳು) ನೇತೃತ್ವದಲ್ಲಿ ಗುತ್ತಿಗೆ ಪದ್ಧತಿ ಬದಲು ಪೌರ ಕಾರ್ಮಿಕರ ಮಾದರಿಯಲ್ಲಿ ನೇರ ವೇತನಕ್ಕೆ ಆಗ್ರಹಿಸಿ ಹಾಗೂ ಪೌರ ಕಾರ್ಮಿಕರ ನೇಮಕಾತಿಗೆ ಒತ್ತಾಯಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಮುಷ್ಕರ ಕೈಗೊಂಡರು.

ಪ್ರತಿಭಟನೆ ಸ್ಥಳಕ್ಕಾಗಮಿಸಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಪೌರ ಕಾರ್ಮಿಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಪ್ರಕಟಿಸಿದರು.

ರಾಜ್ಯ ಸರ್ಕಾರ ಪೌರ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ಸೊರಕೆ ಆಗ್ರಹಿಸಿದರು.

ನಗರ ಸ್ವಚ್ಛತೆ ಕಾಪಾಡುವ ಪೌರ ಕಾರ್ಮಿಕರು ಮತ್ತವರ ಕುಟುಂಬದ ಆರೋಗ್ಯವೂ ಚೆನ್ನಾಗಿರಬೇಕು. ಅವರಿಗೂ ಸರಕಾರಿ ನೌಕರರ ಮಾನ್ಯತೆ ನೀಡಬೇಕು. ಪೌರ ಕಾರ್ಮಿಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳದೇ, ನೇರ ನೇಮಕಾತಿ ಮಾಡಬೇಕು. ಕಾಂಟ್ರಾಕ್ಟ್ ನೇಮಕಾತಿ ಪದ್ಧತಿ ನಿಲ್ಲಿಸಬೇಕು ಎಂದರು.

ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ರಮೇಶ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಯತೀಶ್ ಕರ್ಕೇರ, ಶರತ್ ಶೆಟ್ಟಿ, ಗಣೇಶ್ ನೆರ್ಗಿ, ಗಣೇಶ್ ದೇವಾಡಿಗ, ಸಾಯಿರಾಜ್ ಕಿದಿಯೂರು, ಸಂಜಯ್ ಆಚಾರ್ಯ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!