ಸುದ್ದಿಕಿರಣ ವರದಿ
ಭಾನುವಾರ, ಜುಲೈ 31
ಸುರತ್ಕಲ್ ಹತ್ಯೆ ಪ್ರಕರಣಕ್ಕೆ ಬಳಸಿದ ಕಾರು ಇನ್ನಾದಲ್ಲಿ ಪತ್ತೆ
ಪಡುಬಿದ್ರಿ: ಇತ್ತೀಚೆಗೆ ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಗೆ ಬಳಸಿದ ಬಿಳಿ ಬಣ್ಣದ ಇಯಾನ್ ಕಾರು ಇಲ್ಲಿಗೆ ಸಮೀಪದ ಇನ್ನಾ ಗ್ರಾಮದ ಕಾಜರಕಟ್ಟೆ ಎಂಬಲ್ಲಿನ ಅಶ್ವತ್ಥಕಟ್ಟೆ ನಿರ್ಜನ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ.
ನಿರ್ಜನ ಪ್ರದೇಶದಲ್ಲಿ ಅಪರಿಚಿತ ಕಾರು ಇರುವ ಬಗ್ಗೆ ಸ್ಥಳೀಯರು ಉಡುಪಿ ಜಿಲ್ಲಾ ಪೋಲಿಸರಿಗೆ ಮಾಹಿತಿ ನೀಡಿದ್ದು, ಪೋಲಿಸರು ಸ್ಥಳಕ್ಕೆ ತೆರಳಿ ಕಾರನ್ನು ಗಮನಿಸಿದಾಗ ಅದು ಫಾಝಿಲ್ ಹತ್ಯೆಗೆ ಬಳಸಿದ ಕಾರು ಎಂದು ತಿಳಿದುಬಂದಿದೆ.
ಆರೋಪಿಗಳು ಕಾರಿನಲ್ಲಿ ಸುರತ್ಕಲ್ ನಿಂದ ಇನ್ನಾಕ್ಕೆ ಆಗಮಿಸಿ, ಕಾರು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಕಾರಿನೊಳಗೆ ಮೈಕ್ರೋ ಸಿಮ್, ಹಿಂಬದಿಯ ಸೀಟಿನಲ್ಲಿ ರಕ್ತದ ಕಲೆಗಳು, ನೀರಿನ ಬಾಟಲಿ ಮತ್ತು ಸ್ವಲ್ಪ ಹಣ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕಾರನ್ನು ಪಡುಬಿದ್ರೆ ಪೋಲಿಸರು ಟರ್ಪಾಲು ಹೊದೆಸಿ ಮುಚ್ಚಿದ್ದು, ಮಂಗಳೂರಿನಿಂದ ವಿಧಿ ವಿಜ್ಞಾನ ಪ್ರಯೋಗಾಲಯದವರು ಆಗಮಿಸಿದ್ದಾರೆ.