Thursday, July 7, 2022
Home ಸಮಾಚಾರ ಜಿಲ್ಲಾ ಕೇಂದ್ರಕ್ಕೆ ಸ್ಥಾನಕ್ಕೆ ಸಹಾಯಕ ಆಯುಕ್ತರ ನೇಮಕವಾಗಲಿ

ಜಿಲ್ಲಾ ಕೇಂದ್ರಕ್ಕೆ ಸ್ಥಾನಕ್ಕೆ ಸಹಾಯಕ ಆಯುಕ್ತರ ನೇಮಕವಾಗಲಿ

ಕಾಪು: ಕಚೇರಿಗೆ ಸಂಬಂಧಿಸಿದ ಕಡತಗಳು ಹಿಂದಿಗಿಂತಲೂ ಈಗ ಜಾಸ್ತಿ ತನಿಖೆಗೆ ಬರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಓರ್ವ ಸಹಾಯಕ ಆಯುಕ್ತರ ಹುದ್ದೆ ನಿರ್ಮಾಣಗೊಳ್ಳುವ ಅಗತ್ಯ ಇದೆ ಎಂದು ಆಗಮ ಪಂಡಿತ ಕೇಂಜ ಶ್ರೀಧರ ತಂತ್ರಿ ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಮನವಿ ಮಾಡಿದ್ದಾರೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಇದ್ದಾಗ ಇದ್ದಷ್ಟೇ ಸಹಾಯಕ ಆಯುಕ್ತರ ಹುದ್ದೆ ಈಗಲೂ ಅಷ್ಟೇ ಇದೆ. ಆದರೆ ಉಡುಪಿ, ಬ್ರಹ್ಮಾವರ, ಕಾಪು, ಬೈಂದೂರು, ಕುಂದಾಪುರ, ಕಾರ್ಕಳ, ಹೆಬ್ರಿ ತಾಲೂಕುಗಳಾಗಿ ವಿಂಗಡಣೆಯಾದ ಬಳಿಕ ಮೂವರು ತಹಶಿಲ್ದಾರರ ಬದಲು ಏಳು ತಹಶಿಲ್ದಾರರನ್ನು ಸರ್ಕಾರ ನೇಮಿಸಿದೆ.

ಈ ಎಲ್ಲ ತಾಲೂಕುಗಳಿಗೆ ಕುಂದಾಪುರ ತಾಲೂಕಿನಲ್ಲಿ ಓರ್ವ ಸಹಾಯಕ ಆಯುಕ್ತರಿದ್ದಾರೆ. ಕಚೇರಿಗೆ ಸಂಬಂಧಿಸಿದ ಕೆಲಸಗಳಿಗೆ ದಕ್ಷಿಣದ ಗಡಿಭಾಗದಲ್ಲಿರುವ ಹೆಜಮಾಡಿ, ಪಡುಬಿದ್ರೆ ಪರಿಸರದ ಗ್ರಾಮಸ್ಥರು ಜಿಲ್ಲಾ ಕೇಂದ್ರಸ್ಥಾನ ಕ್ರಮಿಸಿ ಉತ್ತರದ ಕುಂದಾಪುರದ ಸಹಾಯಕ ಆಯುಕ್ತರನ್ನೇ ಕಾಣಲು ತೆರಳಬೇಕು.

ಕುಂದಾಪುರ ಸಹಾಯಕ ಆಯುಕ್ತರ ಕಾರ್ಯಕ್ಷೇತ್ರ ಮತ್ತು ಕಾರ್ಯಬಾಹುಳ್ಯದ ಒತ್ತಡ ಕಡಿಮೆಯಾಗಿ ಜನರಿಗೆ ಅನುಕೂಲ ಹೆಚ್ಚಾಗಲು ಉಡುಪಿ ಜಿಲ್ಲಾ ಕೇಂದ್ರದಲ್ಲಿ ಅಲ್ಲದೆ, ಕಾಪು ತಾಲೂಕಿನಲ್ಲಿ ಸಹಾಯಕ ಆಯುಕ್ತರ ಕಚೇರಿ ತೆರೆಯುವಂತೆ ಶ್ರೀಧರ ತಂತ್ರಿ ಆಗ್ರಹಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!