Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಪೇಜಾವರ ಶ್ರೀಗಳಿಂದ ಸ್ವರ್ಣೆಗೆ ಆರತಿ

ಪೇಜಾವರ ಶ್ರೀಗಳಿಂದ ಸ್ವರ್ಣೆಗೆ ಆರತಿ

ಉಡುಪಿ: ಪೆರಂಪಳ್ಳಿ ಸಮೀಪದ ಶೀಂಬ್ರ ಕೃಷ್ಣಾಂಗಾರಕ ಸ್ನಾನಘಟ್ಟದ ಸ್ವರ್ಣಾ ನದಿಯ ತೀರದಲ್ಲಿ ಮಂಗಳವಾರ ಸ್ವರ್ಣಾರತಿ ಕಾರ್ಯಕ್ರಮ ನಡೆಯಿತು.

ಸ್ವರ್ಣಾ ನದಿಯ ರಕ್ಷಣೆ ಬಗ್ಗೆ ಜನಜಾಗೃತಿ ಮೂಡಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜಿಲ್ಲಾ ಘಟಕದ ಚಿಂತನೆಯೊಂದಿಗೆ ನಡೆದ ಸ್ವರ್ಣಾರತಿ ಕಾರ್ಯಕ್ರಮದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆರತಿ ಬೆಳಗಿ, ಸ್ವರ್ಣಾ ನದಿ ರಕ್ಷಣೆಗೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ದೇವಳದ ವ್ಯವಸ್ಥಾಪಕ ಕೃಷ್ಣಮೂರ್ತಿ ಶಿವತ್ತಾಯ, ಅರ್ಚಕ ನವೀನ್ ಶಿವತ್ತಾಯ, ಎಂಜಿನಿಯರ್ ರಮೇಶ್ ರಾವ್, ರಘುರಾಮಾಚಾರ್ಯ, ಪ್ರಭಾಕರ ಭಟ್, ಪ್ರಶಾಂತ್ ಭಟ್, ಶಶಾಂಕ್ ಶಿವತ್ತಾಯ, ವಾಸುದೇವ ಭಟ್ ಇದ್ದರು.

ಸ್ಥಳೀಯ ಭಜನಾ ಮಂಡಳಿ ಸದಸ್ಯರಿಂದ ಭಜನೆ, ಯುವಕರ ತಂಡದಿಂದ ಚಂಡೆವಾದನ, ತೆಪ್ಪದಲ್ಲಿ ವಿದುಷಿ ಪವನಾ ಬಿ. ಆಚಾರ್ಯ ಅವರಿಂದ ವೀಣಾವಾದನ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!