Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ತಡೆಗೋಡೆ ನಿರ್ಮಾಣ ಗುದ್ದಲಿಪೂಜೆ

ತಡೆಗೋಡೆ ನಿರ್ಮಾಣ ಗುದ್ದಲಿಪೂಜೆ

ಉಡುಪಿ: ಮಲ್ಪೆ- ಪಡುಕೆರೆ ಸಮುದ್ರತೀರದಲ್ಲಿ ಸಮುದ್ರ ಕೊರೆತ ತಡೆಯುವ ನಿಟ್ಟಿನಲ್ಲಿ 5 ಕೋ. ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆ ಕಾಮಗಾರಿಗೆ ಶಾಸಕ ರಘುಪತಿ ಭಟ್ ಗುದ್ದಲಿ ಪೂಜೆ ನೆರವೇರಿಸಿದರು.

ಈ ಕಾಮಗಾರಿಯಿಂದಾಗಿ ಸ್ಥಳೀಯ ಜನತೆಗೆ ಉಪಯೋಗವಾಗಲಿದೆ. ಸಮುದ್ರ ಕೊರೆತದಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗುವುದನ್ನು ತಡೆಯಲು ಸಾಧ್ಯ ಎಂದರು.

ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರಬಾಬು, ತಾ. ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಶಿಲ್ಪಾ ರವೀಂದ್ರ, ಅಂಬಲಪಾಡಿ ಗ್ರಾ. ಪಂ. ಸದಸ್ಯ ಪ್ರಮೋದ್ ಕೆ. ಸಾಲ್ಯಾನ್, ಕಡೆಕಾರ್ ಗ್ರಾ. ಪಂ. ಸದಸ್ಯರಾದ ವಸಂತ ಕುಂದರ್, ಪ್ರವೀಣ ಸುವರ್ಣ ಮತ್ತು ವೇದಾವತಿ ಹಾಗೂ ಸ್ಥಳೀಯರಾದ ರಂಜನ್, ದಿನಕರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!