ಉಡುಪಿ: ಮಂಗಳೂರು ವಿಮಾನ ನಿಲ್ದಾಣಕ್ಕೆ ವಿಮಾನ ಸಂಶೋಧಕ ಭಾರತೀಯನ ಹೆಸರಿಡುವಂತೆ ಸಾವರ್ಕರ್ ಸ್ಮೃತಿ ವೇದಿಕೆ ಸಲಹೆ ನೀಡಿದೆ.
ಈ ಕುರಿತು ಹೇಳಿಕೆ ನೀಡಿರುವ ವೇದಿಕೆ ಸಂಚಾಲಕ ಜಲಂಚಾರು ರಘುಪತಿ ತಂತ್ರಿ, ಇದೀಗ ಮಂಗಳೂರು ವಿಮಾನ ನಿಲ್ದಾಣ, ಅದಾನಿ ವಿಮಾನ ನಿಲ್ದಾಣ ಎಂದು ನಾಮಕರಣಗೊಂಡಿರುವುದು ತೀವ್ರ ವಿವಾದಕ್ಕೆ ಗುರಿಯಾಗಿದೆ. ವಿಮಾನ ನಿಲ್ದಾಣಕ್ಕೆ ರಾಣಿ ಅಬ್ಬಕ್ಕ, ಕೋಟಿ ಚೆನ್ನಯ ಅಥವಾ ಶ್ರೀನಿವಾಸ ಮಲ್ಯ ಅವರ ಹೆಸರಿಡಬೇಕೆಂಬ ಆಗ್ರಹ ಕೇಳಿಬರುತ್ತಿದೆ. ಆದರೆ ಪ್ರಾದೇಶಿಕ, ಭಾಷಿಕ ಮೇರೆ ಮೀರಿದ ಹೆಸರೊಂದನ್ನು ಆಯ್ಕೆ ಮಾಡಬಹುದಾಗಿದ್ದು, ಪ್ರಪ್ರಥಮ ವಿಮಾನ ಸಂಶೋಧಕ ಎಂದು ಪರಿಗಣಿಸಲ್ಪಟ್ಟ ಶಿವಕರ್ ಬಾಪೂಜಿ ತಾಲ್ಪಡೆ ಹೆಸರಿಡುವಂತೆ ಆಗ್ರಹಿಸಿದ್ದಾರೆ.
ರೈಟ್ ಸಹೋದರರಿಗೂ 8 ವರ್ಷ ಮೊದಲೇ 1895ರಲ್ಲಿ ಮುಂಬಯಿಯ ಶಿವಕರ್ ಬಾಪೂಜಿ ತಾಲ್ಪಡೆ ಮೊದಲ ಬಾರಿಗೆ ಮಾನವ ರಹಿತ ವಿಮಾನ ಯಶಸ್ವಿಯಾಗಿ ಹಾರಿಸಿ, ಭೂಮಿಗೆ ಇಳಿಸಿದ್ದ. ಆತನ ಹೆಸರಡುವ ಮೂಲಕ ಭಾರತೀಯ ವಿಮಾನ ಸಂಶೋಧಕನೋರ್ವನ ಹೆಸರು ಇರಿಸಿದ ಮೊದಲ ವಿಮಾನ ನಿಲ್ದಾಣ ಮಂಗಳೂರು ಎಂಬ ಹೆಗ್ಗಳಿಕೆಗೆ ಪಾತ್ರವಾಗುತ್ತದೆ ಎಂದು ಜಲಂಚಾರು ರಘುಪತಿ ತಂತ್ರಿ ತಿಳಿಸಿದ್ದಾರೆ
ತಾಲ್ಪಡೆ ಹೆಸರಿಡಲು ಸಲಹೆ
ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...