Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ವಿಶ್ವ ತಂಬಾಕು ರಹಿತ ದಿನ ಕಲಾಕೃತಿ ರಚನೆ

ವಿಶ್ವ ತಂಬಾಕು ರಹಿತ ದಿನ ಕಲಾಕೃತಿ ರಚನೆ

ಸುದ್ದಿಕಿರಣ ವರದಿ
ಮಂಗಳವಾರ, ಮೇ 31

ವಿಶ್ವ ತಂಬಾಕು ರಹಿತ ದಿನ ಕಲಾಕೃತಿ ರಚನೆ

ಉಡುಪಿ: ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಸಮುದಾಯ ವೈದ್ಯಕೀಯ ವಿಭಾಗ ಆಶ್ರಯದಲ್ಲಿ ಕೆ.ಎಂ.ಸಿ ಮಣಿಪಾಲ ಸಹಯೋಗದೊಂದಿಗೆ ಕಲಾವಿದ ಶ್ರೀನಾಥ್ ಮಣಿಪಾಲ ರಚಿಸಿದ ತಂಬಾಕು ಜಾಗೃತಿ ಕಲಾಕೃತಿಯ ಅನಾವರಣ ಮಂಗಳವಾರ ನಡೆಯಿತು.

ಕೆ.ಎಂ.ಸಿ. ಇಂಟರ್ಯಾಕ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೆ.ಎಂ.ಸಿ. ಡೀನ್ ಡಾ. ಶರತ್ ರಾವ್ ಹಾಗೂ ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ವೈದ್ಯಕೀಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ‘ತಂಬಾಕಿನ ಬಂಧನ- ಪರಿಸರದ ರೋಧನ’ ಎಂಬ ತಂಬಾಕು ಜಾಗೃತಿ ಕಲಾಕೃತಿ ಅನಾವರಣಗೊಳಿಸಿದರು.

ಸಮುದಾಯ ವೈದ್ಯಕೀಯ ವಿಭಾಗ ಮುಖ್ಯಸ್ಥ ಡಾ. ಅಶ್ವಿನಿ ಕುಮಾರ್ ಇದ್ದರು.

ಸಮುದಾಯ ವೈದ್ಯಕೀಯ ವಿಭಾಗ ಸಹ ಪ್ರಾಧ್ಯಾಪಕ, ಜಿಲ್ಲಾ ತಂಬಾಕು ನಿಯಂತ್ರಣ ವಿಭಾಗದ ಸದಸ್ಯ ಡಾ. ಮುರುಳೀಧರ ಕುಲಕರ್ಣಿ ಕಲಾಕೃತಿ ಕುರಿತು ಮಾಹಿತಿ ನೀಡಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!