ಉಡುಪಿ: ಬಾರಕೂರು ಧರ್ಮಶಾಲೆ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನಕ್ಕೆ ಕೇರಳ ತಿರುವನಂತಪುರದ ಶ್ರೀ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಮಹಾರಾಜ ಶ್ರೀ ಪದ್ಮನಾಭ ವರ್ಮ ಭೇಟಿ ನೀಡಿದರು.
ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಭಟ್ ದೇವರ ಪ್ರಸಾದ ನೀಡಿದರು.
ವರ್ಮ ಅವರ ಆಪ್ತ ಕಾರ್ಯದರ್ಶಿ ರಾಮು, ನಿವೃತ್ತ ಪ್ರಾಂಶುಪಾಲ ಸೀತಾರಾಮ ಶೆಟ್ಟಿ, ಜಯರಾಮ ರಾವ್, ಭಜನೆ ಗುರು ರಾಘವೇಂದ್ರ ರಾವ್, ಕೃಷ್ಣಮೂರ್ತಿ ರಾವ್, ಶ್ರೀ ಮಾಸ್ತಿ ದುರ್ಗಾ ಮಹಿಳಾ ಭಜನಾ ಬಳಗದ ಸದಸ್ಯರು ಮೊದಲಾದವರಿದ್ದರು