Tuesday, May 17, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಭಾರತ- ಚೀನಾ ಗಡಿಯಲ್ಲಿ ತುಳು ಧ್ವಜ ಸ್ಥಾಪನೆ

ಭಾರತ- ಚೀನಾ ಗಡಿಯಲ್ಲಿ ತುಳು ಧ್ವಜ ಸ್ಥಾಪನೆ

ಸುದ್ದಿಕಿರಣ ವರದಿ
ಶನಿವಾರ, ಮಾರ್ಚ್ 26

ಭಾರತ- ಚೀನಾ ಗಡಿಯಲ್ಲಿ ತುಳು ಧ್ವಜ ಸ್ಥಾಪನೆ
ಉಡುಪಿ: ಜಿಲ್ಲೆಯ ಉತ್ಸಾಹಿ ಸಾಹಸಿ ಬೈಕ್ ಕ್ರೀಡಾಳುಗಳಾದ ಖ್ಯಾತ ಯೂ ಟ್ಯೂಬರ್ ಶಟರ್ ಬಾಕ್ಸ್ ಫಿಲ್ಮ್ಸ್ ಪ್ರಾಯೋಜಕ ಸಚಿನ್ ಮತ್ತು ಮಣಿಪಾಲದ ಯುವ ಉದ್ಯಮಿ ಮತ್ತು ಸಾಹಸ ಬೈಕಿಂಗ್ ಕ್ರೀಡಾಪಟು ಅರ್ಜುನ್ ಪೈ ಈಚೆಗೆ ಬೈಕ್ ಪ್ರವಾಸ ಕೈಗೊಂಡು ಭಾರತ- ಚೀನಾ ಗಡಿ ಪ್ರದೇಶದ 15,300 ಅಡಿ ಎತ್ತರದ ಝುಪಾಕ್ ನಲ್ಲಿ ತುಳುನಾಡ ಧ್ವಜ ಹಾರಿಸಿ ತುಳು ಪ್ರೇಮ ಮೆರೆದಿದ್ದಾರೆ.

ದೆಹಲಿಯಿಂದ ಪ್ರಾರಂಭಿಸಿದ ಬೈಕ್ ಪ್ರವಾಸದಲ್ಲಿ 1,900 ಕಿ.ಮೀ ದೂರ ಕ್ರಮಿಸಿ ಹಿಕ್ಕಿಮ್, 12,270 ಅಡಿ ಎತ್ತರದಲ್ಲಿರುವ ವಿಶ್ವದ ಅತೀ ಎತ್ತರದಲ್ಲಿರುವ ಪೋಸ್ಟ್ ಆಫೀಸ್ ಮತ್ತು 11,320 ಎತ್ತರದ ಇಂಡೋ ಚೈನಾ ಗಡಿಯ ಕೊನೆಯ ಗ್ರಾಮವಾದ ಚಿಕ್ ಟುಲ್ ಗ್ರಾಮಕ್ಕೂ ಭೇಟಿ ನೀಡಿದರು.

ಬೈಕ್ ಯಾತ್ರಾ ತಂಡದಲ್ಲಿ ಅನ್ನಿ ಅರುಣ್ ಮತ್ತು ಸಾಯಿ ಇದ್ದರು.

ಅರ್ಜುನ್ ಮತ್ತವರ ತಂಡ ದೆಹಲಿಯಿಂದ ಮಾ. 1ರಿಂದ ಬೈಕ್ ಯಾತ್ರೆ ಪ್ರಾರಂಭಿಸಿ 1,900 ಕಿ.ಮೀ. ಕ್ರಮಿಸಿ ಸಿಲಿಗುರಿ ತಲುಪಿದರು.

ಮೊದಲ ಹಂತದ ಬೈಕ್ ಯಾತ್ರೆಯಲ್ಲಿ ದೇಶದಾದ್ಯಂತದಿಂದ ಆಗಮಿಸಿದ 15 ಬೈಕರ್ ಗಳ ತಂಡ ಪಾಲ್ಗೊಂಡಿತ್ತು.

ಮಾ. 16ರಿಂದ ಹಿಮಾಚಲ ಪ್ರದೇಶದ ದುರ್ಗಮ ಹಿಮಾಚ್ಛಾದಿತ ಪ್ರದೇಶಗಳಲ್ಲಿ ಬೈಕ್ ಯಾತ್ರೆಯನ್ನು ಉಡುಪಿಯ ಯುವಕರ ತಂಡ ಮುಂದುವರಿಸಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!