Saturday, August 13, 2022
Home ಸಮಾಚಾರ ಅಪರಾಧ ರಸ್ತೆ ಅಪಘಾತದಲ್ಲಿ ಈರ್ವರು ವಿದ್ಯಾರ್ಥಿಗಳು ಬಲಿ

ರಸ್ತೆ ಅಪಘಾತದಲ್ಲಿ ಈರ್ವರು ವಿದ್ಯಾರ್ಥಿಗಳು ಬಲಿ

ಸುದ್ದಿಕಿರಣ ವರದಿ
ಭಾನುವಾರ, ಜುಲೈ 17

ರಸ್ತೆ ಅಪಘಾತದಲ್ಲಿ ಈರ್ವರು ವಿದ್ಯಾರ್ಥಿಗಳು ಬಲಿ
ಬೈಂದೂರು: ಇಲ್ಲಿಗೆ ಸಮೀಪದ ಕಂಬದಕೋಣೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಣಿಪಾಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಮೃತರನ್ನು ಆಂಧ್ರಪ್ರದೇಶದ ಕಲ್ಲೂರಿನ ತರುಣ್ ಕುಮಾರ್ ರೆಡ್ಡಿ (19) ಹಾಗೂ ಆದಿತ್ಯ ರೆಡ್ಡಿ (18) ಎಂದು ಗುರುತಿಸಲಾಗಿದೆ.

ಅವರು ಮಣಿಪಾಲದಿಂದ ಮುರ್ಡೇಶ್ವರಕ್ಕೆ ಬಾಡಿಗೆ ಬೈಕಿನಲ್ಲಿ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿದ ಬೈಕ್ ಡಿವೈಡರ್ ಮಧ್ಯೆ ಇದ್ದ ಸೂಚನಾ ಫಲಕಕ್ಕೆ ಢಿಕ್ಕಿ ಹೊಡೆಯಿತು ಎನ್ನಲಾಗಿದೆ.

ಅದರಿಂದಾಗಿ ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತೀವ್ರ ಗಾಯಗೊಂಡರು.

ಅವರನ್ನು ಆಪದ್ಬಾಂಧವ ಇಬ್ರಾಹಿಂ ಗಂಗೊಳ್ಳಿ ಹಾಗೂ ಪ್ರದೀಪ್ ಖಾರ್ವಿ ಉಪ್ಪುಂದ, ಕೃಷ್ಣ ಮತ್ತು ನದೀಮ್ ಎರಡು ಆ್ಯಂಬುಲೆನ್ಸ್ಗಳಲ್ಲಿ ಆಸ್ಪತ್ರೆಗೆ ಸಾಗಿಸಿದರು. ಆದರೆ, ಗಂಭೀರವಾಗಿ ಗಾಯಗೊಂಡ ಪರಿಣಾಮ ಅವರಿಬ್ಬರೂ ದಾರಿ ಮಧ್ಯೆ ಮೃತಪಟ್ಟರು.

ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!