Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಸಕಾಲ ಸೇವೆಗಳಡಿ ಅರ್ಜಿ ವಿಲೇವಾರಿ: ಪ್ರಥಮ ಸ್ಥಾನಿಯಾದ ಉಡುಪಿ ಜಿಲ್ಲೆ

ಸಕಾಲ ಸೇವೆಗಳಡಿ ಅರ್ಜಿ ವಿಲೇವಾರಿ: ಪ್ರಥಮ ಸ್ಥಾನಿಯಾದ ಉಡುಪಿ ಜಿಲ್ಲೆ

ಸಕಾಲ ಸೇವೆಗಳಡಿ ಅರ್ಜಿ ವಿಲೇವಾರಿ: ಪ್ರಥಮ ಸ್ಥಾನಿಯಾದ ಉಡುಪಿ ಜಿಲ್ಲೆ

(ಸುದ್ದಿಕಿರಣ ವರದಿ)

ಉಡುಪಿ: ಸಕಾಲ ಯೋಜನೆಯಡಿ ವಿಳಂಬ ರಹಿತ ಅರ್ಜಿ ವಿಲೇವಾರಿಯಲ್ಲಿ ಉಡುಪಿ ಜಿಲ್ಲೆ ಜುಲೈ ತಿಂಗಳಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಕಾರ್ಯನಿರ್ವಹಿಸುವ ಮೂಲಕ ಈ ಸ್ಥಾನವನ್ನು ಕಾಯ್ದುಕೊಳ್ಳಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅಧಿಕಾರಿಗಳಿಗೆ ತಿಳಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಕಾಲ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

1,112 ಸೇವೆ
ಸಕಾಲ ಯೋಜನೆ ನಾಗರಿಕರಿಗೆ ಸರಕಾರದ ಸೇವೆಯನ್ನು ನಿಗದಿತ ಕಾಲಾವಧಿಯಲ್ಲಿ ಒದಗಿಸುವ ಪ್ರಮುಖ ಯೋಜನೆಯಲ್ಲಿ ಒಂದಾಗಿದ್ದು, ಸಾರ್ವಜನಿಕರು ಸರಕಾರದ 101 ವಿವಿಧ ಇಲಾಖೆಗಳಲ್ಲಿ 1,112 ಸೇವೆಗಳಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಿ, ಸೇವೆಯ ಪ್ರಯೋಜನ ಪಡೆದುಕೊಳ್ಳಬಹುದು ಎಂದರು.

ಸಾರ್ವಜನಿಕರು ಸಕಾಲದಡಿ ಅರ್ಜಿಯನ್ನು ಪೂರಕ ಅಗತ್ಯ ದಾಖಲೆಯೊಂದಿಗೆ ಸಲ್ಲಿಸಿದಾಗ ಶೀಘ್ರ ಅರ್ಜಿ ವಿಲೇವಾರಿ ಮಾಡಲು ಸಾಧ್ಯವಾಗುತ್ತದೆ ಎಂದ ಅವರು, ಅಧಿಕಾರಿಗಳು ನಿಗದಿತ ಕಾಲಾವಧಿಯಲ್ಲಿ ಅವುಗಳನ್ನು ತಡವಿಲ್ಲದೇ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.

ವಿವಿಧ ಸೇವೆಗಳನ್ನು ಪಡೆಯಲು ನಾಗರಿಕರು ಸಲ್ಲಿಸುವ ಅರ್ಜಿಗಳ ತಿರಸ್ಕಾರ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಬೇಕು. ಸಕಾರಣವಿಲ್ಲದೆ ಯಾವುದೇ ಅರ್ಜಿಗಳನ್ನು ತಿರಸ್ಕರಿಸಬಾರದು ಒಂದೊಮ್ಮೆ ತಿರಸ್ಕರಿಸಿದಲ್ಲಿ ಸರಿಯಾದ ಕಾರಣ ನೀಡಬೇಕು ಎಂದರು.

52 ಸಾವಿರ ಅರ್ಜಿ ಪುರಸ್ಕೃತ
ಜುಲೈ ತಿಂಗಳಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಸಕಾಲದಡಿ 59,237 ಅಜರ್ಿ ಬಂದಿದ್ದು, ಅವುಗಳಲ್ಲಿ 52,511 ಅರ್ಜಿ ಪುರಸ್ಕೃತಗೊಂಡು 1,094 ಅಜರ್ಿ ತಿರಸ್ಕೃತಗೊಂಡಿವೆ ಎಂದು ಎಡಿಸಿ ತಿಳಿಸಿದರು.

ಸಕಾಲ ಯೋಜನೆ 2011ರಿಂದ ರಾಜ್ಯದಲ್ಲಿ ಜಾರಿಗೆ ಬಂದಿದ್ದು ಈವರೆಗೆ 6.53 ಕೋಟಿ ಅರ್ಜಿ ಬಂದಿದ್ದು, ಅವುಗಳಲ್ಲಿ 5.98 ಕೋಟಿಯಷ್ಟು ಪುರಸ್ಕೃತಗೊಂಡು 45.02 ಲಕ್ಷ ಅರ್ಜಿ ತಿರಸ್ಕೃತಗೊಂಡು, 6.43 ಕೋಟಿ ವಿಲೇವಾರಿಯಾಗಿದೆ ಎಂದರು.

ಜಿಲ್ಲೆಯಲ್ಲಿ ಈವರೆಗೆ 14.15 ಲಕ್ಷ ಅರ್ಜಿ ಬಂದಿದ್ದು, ಅವುಗಳಲ್ಲಿ 13.58 ಲಕ್ಷದಷ್ಟು ಪುರಸ್ಕೃತಗೊಂಡು 42,194 ಅರ್ಜಿ ವಿಲೇವಾರಿಗೊಂಡಿವೆ ಎಂದರು.

ಅಧಿಕಾರಿಗಳು ಮುತುವರ್ಜಿ ವಹಿಸಿ ಅರ್ಜಿ ವಿಲೇವಾರಿ ಮಾಡಬೇಕು. ವಿಲೇವಾರಿ ವಿಳಂಬ ಮಾಡಿದವರಿಗೆ ದಂಡ ವಿಧಿಸುವ ಅವಕಾಶವಿದೆ. ಅಲ್ಲದೇ ವಿಳಂಬವಾದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಎಂದು ಎಡಿಸಿ ಪ್ರಭು ಹೇಳಿದರು.

ಸಭೆಯಲ್ಲಿ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಕಾಲ ಯೋಜನೆ ನೋಡೆಲ್ ಅಧಿಕಾರಿಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!