Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಯುಪಿಎಸ್.ಸಿ ರ್ಯಾಂಕ್ ವಿಜೇತ ವಿದ್ಯಾರ್ಥಿಗೆ ಅಭಿನಂದನೆ

ಯುಪಿಎಸ್.ಸಿ ರ್ಯಾಂಕ್ ವಿಜೇತ ವಿದ್ಯಾರ್ಥಿಗೆ ಅಭಿನಂದನೆ

ಸುದ್ದಿಕಿರಣ ವರದಿ
ಬುಧವಾರ, ಜೂನ್ 15

ಯುಪಿಎಸ್.ಸಿ ರ್ಯಾಂಕ್ ವಿಜೇತ ವಿದ್ಯಾರ್ಥಿಗೆ ಅಭಿನಂದನೆ
ಕಾರ್ಕಳ: ಯುಪಿಎಸ್.ಸಿ. ಪರೀಕ್ಷೆಯಲ್ಲಿ 545ನೇ ರ್ಯಾಂಕ್ ಗಳಿಸಿದ ಇಲ್ಲಿನ ಜರಿಗುಡ್ಡೆ ನಿವಾಸಿ ಮೊಹಮದ್ ಶೌಕತ್ ಅಝೀಮ್ ಅವರನ್ನು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಘಟಕ ಅಧ್ಯಕ್ಷ ಮೊಹಮ್ಮದ್ ಶರೀಫ್ ನೇತೃತ್ವದಲ್ಲಿ ಒಕ್ಕೂಟ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಜಮೀಯ್ಯತುಲ್ ಪಲಾಹ್ ಉಡುಪಿ ದ.ಕ. ಜಿಲ್ಲಾ ಅಧ್ಯಕ್ಷ ಸಬೀಹ್ ಅಹ್ಮದ್ ಖಾಝಿ, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಉಪಾಧ್ಯಕ್ಷ ಮೊಹಮ್ಮದ್ ಗೌಸ್ ಮಿಯ್ಯಾರು, ಮಾಜಿ ಅಧ್ಯಕ್ಷ ಕಾರ್ಕಳ ಮುಸ್ಲಿಂ ಜಮಾತ್ ಅಧ್ಯಕ್ಷ ಅಶ್ಪಾಕ್ ಅಹ್ಮದ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ತಾಲೂಕು ಅಧ್ಯಕ್ಷ ನಾಸೀರ್ ಶೇಖ್ ಬೈಲೂರು, ಜಮೀಯ್ಯತುಲ್ ಪಲಾಹ್ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಯಾಕುಬ್, ಕಾರ್ಯದರ್ಶಿ ಸಯ್ಯದ್ ಹಸನ್, ಕೋಶಾಧಿಕಾರಿ ಸಮದ್ ಖಾನ್, ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಘಟಕ ಕಾರ್ಯದರ್ಶಿ ಅಬ್ದುಲ್ ರಶೀದ್ ಬಂಗ್ಲೆಗುಡ್ಡೆ, ಕಾರ್ಕಳ ತಾಲೂಕು ಸುನ್ನಿ ಮದ್ರಸ ಮ್ಯಾನೇಜ್ ಮೆಂಟ್ ಸಮಿತಿ ಅಧ್ಯಕ್ಷ ಎಚ್. ಸುಲೇಮಾನ್ ಬಜಗೋಳಿ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!