Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಬಂಧಿತ ಶ್ರೀರಾಮಸೇನೆ ನಾಯಕರ ಬಿಡುಗಡೆಗೆ ಆಗ್ರಹ

ಬಂಧಿತ ಶ್ರೀರಾಮಸೇನೆ ನಾಯಕರ ಬಿಡುಗಡೆಗೆ ಆಗ್ರಹ

ಸುದ್ದಿಕಿರಣ ವರದಿ
ಶನಿವಾರ, ಜುಲೈ 2

ಬಂಧಿತ ಶ್ರೀರಾಮಸೇನೆ ನಾಯಕರ ಬಿಡುಗಡೆಗೆ ಆಗ್ರಹ
ಉಡುಪಿ: ಕನ್ಹಯ್ಯ ಲಾಲ್ ಹತ್ಯೆ ವಿರೋಧಿಸಿ ಹೊಸಪೇಟೆಯಲ್ಲಿ ಶನಿವಾರ ನಡೆದ ಪ್ರತಿಭಟನೆ ಸಂದರ್ಭ ಶ್ರೀರಾಮ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಹಾಗೂ ಬಳ್ಳಾರಿ ಜಿಲ್ಲಾಧ್ಯಕ್ಷ ಸಂಜೀವ ಮರಡಿ ಮೊದಲಾದವರನ್ನು ಬಂಧಿಸಿರುವುದು ಹಾಗೂ ಲಾಠಿಛಾರ್ಜ್ ಮಾಡಿರುವುದನ್ನು ಉಡುಪಿ ಜಿಲ್ಲಾ ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀರಾಮ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು, ಹಿಂದುತ್ವದಡಿಯಲ್ಲಿ ಅಧಿಕಾರಕ್ಕೆ ಬಂದ ಪಕ್ಷ ಹಾಗೂ ಸರಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವುದು ಅತ್ಯಂತ ಖೇದಕರ.

ಹಿಂದೂ ದಮನ ನೀತಿ ಅನುಸರಿಸಿದಲ್ಲಿ ಶ್ರೀರಾಮ ಸೇನೆ ಕೈಕಟ್ಟಿ ಕುಳಿತುಕೊಳ್ಳವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂಧಿತ ನಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಸರಕಾರದ ವಿರುದ್ಧವೇ ಹೋರಾಟ ನಡೆಯಲಿದೆ ಎಂದು ಅಂಬೆಕಲ್ಲು ಸರಕಾರವನ್ನು ಎಚ್ಚರಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!