Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ವಿಸ್ಟಡೋಮ್ ಕೋಚ್ ಸಹಿತ ಹಗಲು ರೈಲು ಆರಂಭಿಸಿ

ವಿಸ್ಟಡೋಮ್ ಕೋಚ್ ಸಹಿತ ಹಗಲು ರೈಲು ಆರಂಭಿಸಿ

ಉಡುಪಿ: ವಾರದಲ್ಲಿ 3 ದಿನ ಚಲಿಸುತ್ತಿದ್ದ ಕಾರವಾರ- ಯಶವಂತಪುರ ರೈಲು ಲಾಭದಾಯಕ ಅಲ್ಲ ಎಂಬ ಕಾರಣ ನೀಡಿ ಕಳೆದ ಸುಮಾರು ಒಂದು ವರ್ಷದಿಂದ ರದ್ದುಗೊಳಿಸಲಾಗಿದೆ. ಈ ರೈಲನ್ನು ಆರಂಭಿಸಬೇಕು ಹಾಗೂ ವಿಸ್ಟಾಡೋಮ್ ಕೋಚ್ ಅಳವಡಿಸಬೇಕು ಎಂದು ಸಿಪಿಐ (ಎಂ) ಉಡುಪಿ ಜಿಲ್ಲಾ ಸಮಿತಿ ರೈಲ್ವೆ ಸಚಿವಾಲಯವನ್ನು ಆಗ್ರಹಿಸಿದೆ.

ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಚ್ಚಿಸುವ ಮೂಲಕ ಕೋವಿಡ್ ನಂತರದ ಕಾಲಘಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡುವತ್ತ ಸರ್ಕಾರ ಮತ್ತು ಜನಪ್ರತಿನಿಧಿಗಳು ಚಿಂತಿಸಬೇಕು. ರೈಲು ಸಂಚಾರ ಪುನರಾರಂಭ ಮತ್ತು ವಿಸ್ಟಾಡೋಮ್ ಕೋಚ್ ಅಳವಡಿಕೆ ಪ್ರವಾಸೋದ್ಯಮ ಹೆಚ್ಚಿಸಲು ಸಹಾಯ ಮಾಡುತ್ತದೆ.

ಅಲ್ಲದೆ ಆಸ್ಪತ್ರೆ ಮತ್ತು ಕಚೇರಿಗಳಿಗೆ ತೆರಳುವವರಿಗೆ ಅನುಕೂಲವಾಗುತ್ತದೆ ಎಂದು ಸಿಪಿಐ (ಎಂ) ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!