ಉಡುಪಿ: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಣಿಪಾಲದ ತ್ರಿವರ್ಣ ಕಲಾವಿದರಾದ ಅಂಬಿಕಾ ಶೆಟ್ಟಿ, ಚೇತನಾ ಗಣೇಶ್, ದೀಪ್ತಿ, ಎಂ. ಪಾವನಿ, ಹೈಮಾ ಮಟೇಟಿ, ರಕ್ಷಿತಾ ಶೆಟ್ಟಿ, ಶೈಲಾ ಭಟ್, ಶೋಭಾ ಮಲ್ಯ, ಡಾ. ಸುಮೀತ್ ಕೌರ್ ದಿಲ್, ಸುನೀತಾ ಮತ್ತು ವಿದ್ಯಾರಾಣಿ ಕಲಾಶಿಕ್ಷಕ ಹರೀಶ ಸಾಗ ಮಾರ್ಗದರ್ಶನದಲ್ಲಿ ಮಲ್ಪೆ ಕಡಲತೀರದಲ್ಲಿ ಮರಳು ಕಲಾಕೃತಿ ರಚಿಸಿದರು.
20 ಅಡಿ ಅಗಲ ಮತ್ತು 3.5 ಅಡಿ ಎತ್ತರದ ಮರಳು ಕಲಾಕೃತಿ ಸಾರ್ವಜನಿಕರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.