Monday, July 4, 2022
Home ಸಮಾಚಾರ ವಾರಂಬಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರ ಸಹಿತ ಹಲವರು ಬಿಜೆಪಿ ಮಡಿಲಿಗೆ

ವಾರಂಬಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷರ ಸಹಿತ ಹಲವರು ಬಿಜೆಪಿ ಮಡಿಲಿಗೆ

ಬ್ರಹ್ಮಾವರ: ವಾರಂಬಳ್ಳಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಎಸ್.ಸಿ. ಮೋರ್ಚಾ ಅಧ್ಯಕ್ಷರಾಗಿದ್ದ ಎಸ್. ನಾರಾಯಣ್ ಸಹಿತ ಹಲವರು ಬಿಜೆಪಿ ಸೇರ್ಪಡೆಗೊಂಡರು.

ಶಾಸಕ ಶ್ರೀ ಕೆ. ರಘುಪತಿ ಭಟ್ ಪಕ್ಷ ಧ್ವಜ ನೀಡುವ ಮೂಲಕ ಅವರೆಲ್ಲರನ್ನೂ ಬರಮಾಡಿಕೊಂಡರು.

2 ಬಾರಿ ಸದಸ್ಯರಾಗಿ, ಬಳಿಕ ಅಧ್ಯಕ್ಷರಾಗಿದ್ದ ನಿತ್ಯಾನಂದ ಬಿ. ಆರ್., 5 ಬಾರಿ ಸದಸ್ಯರಾಗಿ ಅಧ್ಯಕ್ಷರೂ ಆಗಿದ್ದ ನವೀನ್ ಚಂದ್ರ ನಾಯಕ್ ಸೇರಿದಂತೆ ವಾರಂಬಳ್ಳಿ ಗ್ರಾ. ಪಂ.ನ ಕಾಂಗ್ರೆಸ್ ಬೆಂಬಲಿತ ಮಾಜಿ ಸದಸ್ಯರಾದ ರಾಜು ಸಾಲ್ಯಾನ್, ದೇವಾನಂದ, ಕ್ರಿಸ್ತಿನ್, ಗೋಪಾಲ ದೇವಾಡಿಗ, ಕವಿತಾ, ಹೇಮಾ ಶೆಟ್ಟಿಗಾರ್, ಸದಾನಂದ ಪೂಜಾರಿ, ಗುಲಾಬಿ ಕುಂದರ್, ಸುರೇಶ್ ಬಿರ್ತಿ ಸೇರಿದಂತೆ ಒಟ್ಟು 12 ಮಂದಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ಅಶೋಕ್ ಹೇರೂರು, ವಾರಂಬಳ್ಳಿ ಗ್ರಾ. ಪಂ. ಚುನಾವಣಾ ಉಸ್ತುವಾರಿಗಳಾದ ಸುಧೀರ್ ಶೆಟ್ಟಿ, ಪಕ್ಷ ಮುಖಂಡರಾದ ನಿಶಾನ್ ರೈ, ಬಿರ್ತಿ ರಾಜೇಶ್ ಶೆಟ್ಟಿ, ತಾ. ಪಂ. ಸದಸ್ಯೆ ಕುಸುಮ, ತಾ. ಪಂ. ಸದಸ್ಯ ಉಮೇಶ್ ನಾಯ್ಕ್, ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ನಾಗವೇಣಿ, ಬ್ರಹ್ಮಾವರ ಮಹಾಶಕ್ತಿ ಕೇಂದ್ರ ಸದಸ್ಯ ಉಲ್ಲಾಸ್ ವಾರಂಬಳ್ಳಿ ಮತ್ತು ಹರೀಶ್ ಶೆಟ್ಟಿ ಚೇರ್ಕಾಡಿ ಹಾಗೂ ಪಕ್ಷದ ಹಿರಿಯ ಕಾರ್ಯಕರ್ತರು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!