Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ವಿದ್ಯಾಪೋಷಕ್ ಮನೆ ಹಸ್ತಾಂತರ

ವಿದ್ಯಾಪೋಷಕ್ ಮನೆ ಹಸ್ತಾಂತರ

ಸುದ್ದಿಕಿರಣ ವರದಿ
ಸೋಮವಾರ, ಮೇ 23

ವಿದ್ಯಾಪೋಷಕ್ ಮನೆ ಹಸ್ತಾಂತರ
ಗಂಗೊಳ್ಳಿ: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಿಗೆ ಒಟ್ಟು ಐದು ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಪ್ರಾಯೋಜಕತ್ವದ ಎರಡು ಮನೆಗಳ ಉದ್ಘಾಟನೆ ಸೋಮವಾರ ನಡೆಯಿತು.

ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ, ಇಲ್ಲಿನ ಗಂಗೊಳ್ಳಿಯ ಸ್ವಾತಿ ಖಾರ್ವಿ ಹಾಗೂ ದ್ವಿತೀಯ ಬಿ.ಕಾಂ ಮತ್ತು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ವಡ್ಡರ್ಸೆ ಚೈತ್ರಾ ಮತ್ತು ರಕ್ಷಿತಾ ವಿದ್ಯಾಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾಗಿದ್ದು, ಅವರಿಗೆ ಸಂಸ್ಥೆ ಮನೆ ನಿರ್ಮಿಸಿಕೊಟ್ಟಿದೆ.

ಗಂಗೊಳ್ಳಿಯ ಮನೆಯನ್ನು ಸ್ಥಳೀಯ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಉದ್ಘಾಟಿಸಿ, ವಿದ್ಯಾಪೋಷಕ್ ನ ಅತ್ಯಂತ ಹೆಚ್ಚಿನ ಫಲಾನುಭವಿ ವಿದ್ಯಾರ್ಥಿಗಳು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿದ್ದಾರೆ ಎಂದು ತಿಳಿದು ಸಂತೋಷವಾಯಿತು. ಸಂಸ್ಥೆಯ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿದರು.

ಅಭ್ಯಾಗತರಾಗಿ ಸರಸ್ವತಿ ವಿದ್ಯಾಲಯದ ಸಂಚಾಲಕ ಗಣೇಶ್ ಕಾಮತ್ ಆಗಮಿಸಿ, ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಡ್ಡರ್ಸೆಯ ಮನೆಯನ್ನು ಸಾಲಿಗ್ರಾಮ ಮಕ್ಕಳ ಮೇಳ ಸಂಚಾಲಕ ಎಚ್. ಶ್ರೀಧರ ಹಂದೆ ಉದ್ಘಾಟಿಸಿದರು. ಇದು ನಿಜಾರ್ಥದಲ್ಲಿ ಯಕ್ಷಗಾನ ಕಲಾರಂಗ ಮಾಡುವ ದೇವರು ಮೆಚ್ಚುವ ಕೆಲಸ. ಬಡವರ ಕಣ್ಣೀರೊರೆಸುವ ಇಂಥ ಮಹಾಯಜ್ಞ ಕೈಗೊಂಡಿರುವ ಸಂಸ್ಥೆಗೆ ಶ್ರೇಯಸ್ಸಾಗಲಿ ಎಂದು ಶುಭ ಹಾರೈಸಿದರು.

ಪ್ರಾಯೋಜಕರಾದ ಬೆಂಗಳೂರಿನ ಉದ್ಯಮಿ ಎಚ್. ಎಸ್. ಶೆಟ್ಟಿ, ಸಂಸ್ಥೆಯ ನಿಸ್ಪೃಹ ಸೇವೆ ಕೊಂಡಾಡಿದರು. ಇದೊಂದು ಆದರ್ಶ ಸಂಸ್ಥೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಸದಾ ಸಂಸ್ಥೆಯೊಂದಿಗೆ ಇರುವುದಾಗಿ ತಿಳಿಸಿದರು.

ಇವು ಸಂಸ್ಥೆ ವತಿಯಿಂದ ನಿರ್ಮಿಸಲಾದ 27 ಮತ್ತು 28ನೇ ಮನೆಗಳಾಗಿವೆ.

ಈ ಸಂದರ್ಭದಲ್ಲಿ ಹಾಲಾಡಿ ನಾಗರಾಜ ಶೆಟ್ಟಿ, ಉದ್ಯಮಿ ಯು. ವಿಶ್ವನಾಥ ಶೆಣೈ, ಕಲಾರಂಗ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕಾರ್ಯಕರ್ತರಾದ ಭುವನಪ್ರಸಾದ ಹೆಗ್ಡೆ, ಎಚ್. ಎನ್. ಶೃಂಗೇಶ್ವರ, ವಿದ್ಯಾ ಪ್ರಸಾದ್, ಅಜಿತ್ ಕುಮಾರ್, ಗಣೇಶ್ ಬ್ರಹ್ಮಾವರ, ಸಂತೋಷ್ ಕುಮಾರ್ ಶೆಟ್ಟಿ, ಸುಜಯೀಂದ್ರ ಹಂದೆ, ಪಿ. ಕಿಶನ್ ಇದ್ದರು.

ಸಂಸ್ಥೆ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದಶರ್ಿ ಮುರಲಿ ಕಡೆಕಾರ್ ನಿರೂಪಿಸಿದರು. ಜೊತೆ ಕಾರ್ಯದಶರ್ಿ ಪ್ರೊ. ನಾರಾಯಣ ಎಂ. ಹೆಗಡೆ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!