Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ವಿಪ್ರಭೂಷಣ ಪ್ರಶಸ್ತಿಗೆ ಅಲಂಗಾರು ಈಶ್ವರ ಭಟ್ಟ ಆಯ್ಕೆ

ವಿಪ್ರಭೂಷಣ ಪ್ರಶಸ್ತಿಗೆ ಅಲಂಗಾರು ಈಶ್ವರ ಭಟ್ಟ ಆಯ್ಕೆ

ಮೂಡುಬಿದಿರೆ: ಇಲ್ಲಿಗೆ ಸಮೀಪದ ಅಶ್ವತ್ಥಪುರದ ಶ್ರೀ ನಾರಾಯಣಾನಂದ ಸರಸ್ವತಿ ಟ್ರಸ್ಟ್ ವತಿಯಿಂದ ನೀಡುವ ವಿಪ್ರಭೂಷಣ ಚೊಚ್ಚಲ ಪ್ರಶಸ್ತಿಗೆ ಅಲಂಗಾರು ಈಶ್ವರ ಭಟ್ ಆಯ್ಕೆಯಾಗಿದ್ದಾರೆ.

ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಸಾವಿತ್ರಿ ಸಭಾಭವನದಲ್ಲಿ ಫೆ. 20ರಂದು ಸಂಜೆ 4 ಗಂಟೆಗೆ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್ ವ್ಯವಸ್ಥಾಪಕ ನಿರ್ದೇಶಕ ವೇ| ಮೂ| ಕೆ. ಯಜ್ಞೇಶ್ವರ ಭಟ್ ತಿಳಿಸಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ಎಲ್. ವಿ., ಹಿರ್ಗಾನ ಕುಂದೇಶ್ವರ ಕ್ಷೇತ್ರದ ಕ್ಷೇತ್ರಾಧಿಕಾರಿ ಜಿತೇಂದ್ರ ಕುಂದೇಶ್ವರ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಪಿ. ಸಿ. ಶ್ರೀನಿವಾಸ್ ದಾವಣಗೆರೆ ಅಭ್ಯಾಗತರಾಗಿದ್ದಾರೆ.

ಈಶ್ವರ ಭಟ್ ಪರಿಚಯ
ಸೀತಾರಾಮ ಭಟ್- ಲಕ್ಷ್ಮೀ ದಂಪತಿ ಪ್ರಥಮ ಪುತ್ರ.ನಾಗಿ 1942ರಲ್ಲಿ ಜನಿಸಿದ ಈಶ್ವರ ಭಟ್, ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸರ್ವತೋಮುಖ ಅಭಿವೃದ್ಧಿಯ ರೂವಾರಿ. ಯಕ್ಷಗಾನ ಸಂಘಟಿಸುವ ಕಲಾಭಿಮಾನಿ. ಅನೇಕ ನಾಗಮಂಡಲ, ಬ್ರಹ್ಮಮಂಡಲ, ಸಂಹಿತಾ ಯಾಗ ಮಾಡಿಸಿದ ಅಪೂರ್ವ ಅರ್ಚಕ, ಊರಿನ ಅಭಿವೃದ್ಧಿ ಬಯಸುವ ಪುರೋಹಿತ.

ಅರ್ಚಕರಿಗಾಗಿ ನೀಡಲಾಗುವ ಈ ಪ್ರಶಸ್ತಿಗೆ ಈಶ್ವರ ಭಟ್ಟರನ್ನು ಸ್ವತಃ ಅರ್ಚಕರೂ, ಅನೇಕ ಹೋಮ ಸಂಘಟಿಸಿದವರೂ ಜ್ಯೋತಿಷ್ಕರೂ ವಿದ್ವಾಂಸರೂ ಆಗಿರುವ ಕೆ. ಯಜ್ಞೇಶ್ವರ ಭಟ್ ಆಯ್ಕೆ ಮಾಡಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!