Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಬದ್ಧತೆಯುಕ್ತ ನೌಕರ ವರ್ಗ ಸಂಸ್ಥೆಯ ಅಮೂಲ್ಯ ಆಸ್ತಿ

ಬದ್ಧತೆಯುಕ್ತ ನೌಕರ ವರ್ಗ ಸಂಸ್ಥೆಯ ಅಮೂಲ್ಯ ಆಸ್ತಿ

ಉಡುಪಿ: ಬದ್ಧತೆಯಿಂದ ಕೂಡಿದ ನೌಕರ ವರ್ಗ ಮತ್ತು ಸಮರ್ಥ ಮುಂದಾಳತ್ವ ಇದ್ದಲ್ಲಿ ಯಾವುದೇ ಸಂಸ್ಥೆ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ. ಪ್ರಾಮಾಣಿಕ ಪ್ರಯತ್ನವೊಂದೇ ಯಶಸ್ಸಿಗೆ ಮೂಲ ಮಂತ್ರ ಎಂದು ಜಿಲ್ಲಾ ಶಿಕ್ಷಕ ತರಬೇತಿ ಸಂಸ್ಥೆಯ ಹಿರಿಯ ಉಪನ್ಯಾಸಕ ಅಶೋಕ್ ಕಾಮತ್ ಹೇಳಿದರು.

ಪದೋನ್ನತಿಯೊಂದಿಗೆ ವರ್ಗಾವಣೆ ಹೊಂದಿದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗ ಮುಖ್ಯಸ್ಥ ವಿಶ್ವನಾಥ ಬಾಯರಿ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸ್ವಪ್ರತಿಷ್ಠೆ, ಸ್ವಹಿತಾಸಕ್ತಿ ಬದಿಗಿರಿಸಿ ದುಡಿಯುವ ನೌಕರ ವರ್ಗ ಸಂಸ್ಥೆಯ ಅಮೂಲ್ಯ ಆಸ್ತಿ. ಆ ನೌಕರರನ್ನು ಸಮರ್ಥವಾಗಿ ಮುನ್ನಡೆಸುವ ಯೋಗ್ಯ ಮುಂದಾಳು ಇದ್ದಲ್ಲಿ ಸಂಸ್ಥೆ ಮುನ್ನೆಲೆಗೆ ಬರುವುದರಲ್ಲಿ ಸಂಶಯವಿಲ್ಲ. ವಿಶ್ವನಾಥ ಬಾಯರಿಯವರ ಮುಂದಾಳತ್ವದಿಂದ ಈ ಸಂಸ್ಥೆ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಾಗಿದೆ ಎಂದರು.
ಪದವಿ ಪೂರ್ವ ಕಾಲೇಜು ವಿಭಾಗದ ಪ್ರಭಾರ ಪ್ರಾಂಶುಪಾಲ ಯಾದವ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.

ಎಸ್.ಡಿ.ಎಂ.ಸಿ ಉಪಾಧ್ಯಕ್ಷೆ ತಾರಾದೇವಿ, ಶಿಕ್ಷಣ ಸ್ಥಾಯಿ ಸಮಿತಿಯ ಶೇಖರ್ ಕೋಟ್ಯಾನ್, ದಾನಿ ನಿರುಪಮಾ ಪ್ರಸಾದ್ ಶೆಟ್ಟಿ, ಮಹಾಮಾಯಾ ಫೌಂಡೇಶನ್ ನ ಉಷಾ ಪೈ ಶುಭ ಹಾರೈಸಿದರು.

ವಿಶ್ವನಾಥ ಬಾಯರಿ ದಂಪತಿಯನ್ನು ಸನ್ಮಾನಿಸಲಾಯಿತು.

ಉಪನ್ಯಾಸಕ ಗಂಗಾಧರ್ ಸ್ವಾಗತಿಸಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ ಉರಾಳ್ ವಂದಿಸಿದರು. ಶಿಕ್ಷಕ ಶೇಖರ ಬೋವಿ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!