ಉಡುಪಿ: ದೊಡ್ಡಣಗುಡ್ಡೆ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನಕ್ಕೆ ಮುಂಬಯಿ ಮೀರಾರೋಡ್ ನ ಮಂಡಲ್ ಸಭಾಪತಿ (ಬಿಎಂಸಿ) ಮನೋಜ್ ಧುಬೆ, ಬಿಜೆಪಿ ಪ್ರಮುಖ ರಾಮ್ ನಾರಾಯಣ್ ಧುಬೆ ಹಾಗೂ ಮಹಿಳಾ ಮಂಡಳ ಅಧ್ಯಕ್ಷೆ ರಾಧಾ ರಾಜೇಂದ್ರ ನಾಡರ್ ಕುಟುಂಬ ಸಮೇತವಾಗಿ ಶ್ರೀಕ್ಷೇತ್ರಕ್ಕೆ ಆಗಮಿಸಿದರು.
ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಿ, ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಆಶೀರ್ವಾದ ಪಡೆದರು.
ಶ್ರೀ ರಮಾನಂದ ಗುರೂಜಿ ಉಪಸ್ಥಿತಿಯಲ್ಲಿ ಕೃಷ್ಣಮೂರ್ತಿ ತಂತ್ರಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಉಸ್ತುವಾಗಿ ಕುಸುಮಾ ನಾಗರಾಜ್, ಪ್ರಜ್ಞಾ ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾಂಶುಪಾಲೆ ಉಷಾ ರಮಾನಂದ, ಸಾರಿಗೆ ಉದ್ಯಮಿ ಆನಂದ ಬಾಯಿರಿ, ಸ್ವಸ್ತಿಕ್ ಆಚಾರ್ಯ ಮೊದಲಾದವರಿದ್ದರು.
ಅರ್ಚಕ ಗಜಾನನ ಭಟ್ ಶಿರಸಿ ಶ್ರೀ ದುರ್ಗಾ ಆದಿಶಕ್ತಿ ಮಾತೆಗೆ ವಿಶೇಷ ಪೂಜೆ ನೆರವೇರಿಸಿದರು