Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ವೃದ್ಧಾಶ್ರಮದಲ್ಲಿ ಕ್ರಿಸ್ ಮಸ್ ಆಚರಣೆ

ವೃದ್ಧಾಶ್ರಮದಲ್ಲಿ ಕ್ರಿಸ್ ಮಸ್ ಆಚರಣೆ

ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ಬ್ರಹ್ಮಾವರ ಕರುಣಾಲಯ ವೃದ್ಧಾಶ್ರಮದಲ್ಲಿ ಗುರುವಾರ ಕ್ರಿಸ್ ಮಸ್ ಆಚರಿಸಲಾಯಿತು.

ಕೇಕ್ ಕತ್ತರಿಸುವ ಮೂಲಕ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಅಧ್ಯಕ್ಷ ರೋಬರ್ಟ್ ಮಿನೇಜಸ್ ಕಾರ್ಯಕ್ರಮ ಉದ್ಘಾಟಿಸಿ, ದೇವರು ಮನುಷ್ಯ ರೂಪದಲ್ಲಿ ಸಾಮಾನ್ಯ ಕುಟುಂಬದಲ್ಲಿ ಜನಿಸಿದರು. ಅವರ ಜನನ ಅಸಾಮಾನ್ಯ. ಅವರು ಹುಟ್ಟಿ ಬೆಳೆದ ರೀತಿ, ಅವರ ನಡೆ ನುಡಿ, ವ್ಯಕ್ತಿತ್ವ ಸದಾ ಪ್ರೇರಣೆಯಾಗಿದೆ. ಏಸುಸ್ವಾಮಿ ತನ್ನ ಜೀವನವನ್ನು ಬಡಬಗ್ಗರ, ದೀನ ದಲಿತರ, ಶೋಷಿತ ವರ್ಗದ ಜನರಿಗಾಗಿ ಮೀಸಲಿಟ್ಟಿದ್ದರು.
ಅವರ ಆದರ್ಶ ಪಾಲಿಸುವುದು ನಮ್ಮ ಕರ್ತವ್ಯ ಎಂದರು.

ಈ ಸಂದರ್ಭದಲ್ಲಿ ಸಂಘಟನೆ ವತಿಯಿಂದ ವೃದ್ಧಾಶ್ರಮದ ನಿವಾಸಿಗಳಿಗೆ ಅಗತ್ಯವಿರುವ ವಸ್ತುಗಳು ಹಾಗೂ ಕ್ರಿಸ್ ಮಸ್ ಹಬ್ಬದ ಕುಸ್ವಾರ್ ವಿತರಿಸಲಾಯಿತು. ಸಹಾಯಧನವನ್ನೂ ನೀಡಲಾಯಿತು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಉಪಾಧ್ಯಕ್ಷ ರೊನಾಲ್ಡ್ ಅಲ್ಮೆಡಾ, ಕಾರ್ಯದರ್ಶಿ ಸಂತೋಷ್ ಕರ್ನೇಲಿಯೊ, ಸಹ ಕಾರ್ಯದರ್ಶಿ ಗ್ರೆಗರಿ ಡಿ’ಸೋಜಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಸಹ ಕೋಶಾಧಿಕಾರಿ ಹೆರಿಕ್ ಗೊನ್ಸಾಲ್ವಿಸ್, ಕಲ್ಯಾಣಪುರ ವಲಯಾಧ್ಯಕ್ಷೆ ರೋಜಿ ಬಾರೆಟ್ಟೊ, ಕೋಶಾಧಿಕಾರಿ ಗ್ಯಾರಿಫಿಲ್ಡ್ ಉರ್ಬಾನ್ ಲೂವಿಸ್ ಮೊದಲಾವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!