ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಮಹಿಳೆಗೆ ಬೇಕಾಗಿದೆ ನೆರವಿನ ಹಸ್ತ
ಉಡುಪಿ: ಕುರ್ಕಾಲು ಗ್ರಾಮದ ಕುಂಜಾರುಗಿರಿ ನಿವಾಸಿ ಶಂಕರ್ ಪತ್ನಿ ಸರಸ್ವತಿ (25) ಕಳೆದ ಸುಮಾರು 2 ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಅವರಿಗೆ ವಾರಕ್ಕೆ ಮೂರು ಬಾರಿ ಡಯಲಿಸಿಸ್ ಮಾಡಬೇಕಾಗಿದೆ.
ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಆಕೆಗೆ ಹೆಣ್ಣು ಮಗುವೊಂದಿದೆ. ಈಗಿನ ಪರಿಸ್ಥಿತಿಯಲ್ಲಿ ಅವರಿಗೆ ಡಯಾಲಿಸಿಸ್ ಮಾಡುವುದೇ ಕಷ್ಟಕರವಾಗಿದೆ. ಪರಿಸ್ಥಿತಿ ಚಿಂತಾಜನಕವಾಗಿದ್ದು ಜೀವ ಉಳಿಸಿಕೊಳ್ಳಲು ಪತಿಯ ಕಿಡ್ನಿಯೊಂದನ್ನು ಪತ್ನಿಗೆ ವರ್ಗಾಯಿಸಲು ವೈದ್ಯರು ಸಲಹೆ ನೀಡಿದ್ದು, ಸುಮಾರು 7.50 ಲಕ್ಷ ರೂ. ವೆಚ್ಚ ಬರಬಹುದೆಂದು ತಿಳಿಸಿದ್ದಾರೆ.
ಪತಿ ಶಂಕರ್ ಕಲ್ಲು ಕಡಿಯುವ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಅವರಿಂದ ಇಷ್ಟೊಂದು ದೊಡ್ಡ ಮೊತ್ತ ಭರಿಸುವುದು ಅಸಾಧ್ಯ.
ಈ ನಿಟ್ಟಿನಲ್ಲಿ ಸಹೃದಯಿಗಳು ಆರ್ಥಿಕ ಸಹಾಯ ಮಾಡುವಂತೆ ಶಂಕರ್ ಕಳಕಳಿಯಿಂದ ವಿನಂತಿಸಿದ್ದಾರೆ.
ಅವರ ಬ್ಯಾಂಕ್ ಖಾತೆ ವಿವರ ಇಂತಿದೆ.
ಖಾತೆದಾರರು: ಸರಸ್ವತಿ
ಕೆನರಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ: 110002152050
ಐಎಫ್.ಎಸ್.ಸಿ. ಕೋಡ್: CNRB0010195