Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಧರಾಶಾಹಿಯಾದ ನೀರಿನ ಬೃಹತ್ ಟ್ಯಾಂಕ್!

ಧರಾಶಾಹಿಯಾದ ನೀರಿನ ಬೃಹತ್ ಟ್ಯಾಂಕ್!

ಸುದ್ದಿಕಿರಣ ವರದಿ
ಮಂಗಳವಾರ, ಆಗಸ್ಟ್ 2

ಧರಾಶಾಹಿಯಾದ ನೀರಿನ ಬೃಹತ್ ಟ್ಯಾಂಕ್!
ಉಡುಪಿ: ಪರ್ಕಳದ ಹೆರ್ಗ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಧಾನ ಕಚೇರಿ ಪಕ್ಕದಲ್ಲಿರುವ ಬೃಹತ್ ಗಾತ್ರದ ನೀರಿನ ಟ್ಯಾಂಕ್ ಪಕ್ಕದ ಪರ್ಕಳ ಎಜುಕೇಶನ್ ಸೊಸೈಟಿ ಜಾಗದೊಳಗೆ ಧರಾಶಾಹಿಯಾದೆ.

ತನ್ನೆಲ್ಲ ಸ್ತಂಭಗಳು ಶಿಥಿಲಾವಸ್ಥೆಯಲ್ಲಿದ್ದ ಸುಮಾರು 50 ಸಾವಿರ ಲೀಟರ್ ಸಾಮರ್ಥ್ಯದ ಹಳೆಯದಾದ ನೀರಿನ ಟ್ಯಾಂಕ್ ಇದಾಗಿದೆ. ಪಕ್ಕದಲ್ಲಿ 80ನೇ ಬಡಗಬೆಟ್ಟಿಗೆ ಸಂಚರಿಸುವ ರಸ್ತೆ ಜನ ನಿಬಿಡವಾಗಿದ್ದು, ಆಯತಪ್ಪಿ ರಸ್ತೆಗೆ ಬಿದ್ದಿದ್ದರೆ ಅನಾಹುತ ಸಂಭವಿಸುತ್ತಿತ್ತು. ಪರ್ಕಳ ಎಜುಕೇಶನ್ ಸೊಸೈಟಿ ಜಾಗದಲ್ಲಿ ಹಿಂದೆ ಅಂಗನವಾಡಿಯೂ ಇತ್ತು. ಇದೀಗ ಮುಚ್ಚಲ್ಪಟ್ಟಿದೆ. ಸದ್ಯ ಅಲ್ಲಿರುವ ಕಟ್ಟಡದಲ್ಲಿ ಯಾರೂ ಇಲ್ಲದೇ ಇರುವುದರಿಂದ ಪ್ರಾಣಹಾನಿ ಸಂಭವಿಸಿಲ್ಲ.

ನಗರಸಭೆ ವ್ಯಾಪ್ತಿಯಲ್ಲಿ ಇಂಥ ನಿರುಪಯುಕ್ತ ನೀರಿನ ಟ್ಯಾಂಕ್ ಇದ್ದಲ್ಲಿ ಕೂಡಲೇ ತೆರವುಗೊಳಿಸಬೇಕು. ಈ ಪ್ರಕರಣ ನಗರಸಭೆ ಅಧ್ಯಕ್ಷರ ವಾರ್ಡ್ ಹಾಗೂ ಅವರ ಮನೆಯ ಸಮೀಪ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೆಟ್ಟು, ರಾಜೇಶ್ ಪ್ರಭು ಪರ್ಕಳ ತಿಳಿಸಿದ್ದಾರ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!