ಉಡುಪಿ: ವಿಶ್ವವನ್ನೇ ಬೆಚ್ಚಿಬೀಳಿಸಿದ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ ಕೊವ್ಯಾಕ್ಸಿನ್ ಮತ್ತು ಕೊವಿಶೀಲ್ಡ್ ಎಂಬ ಲಸಿಕೆಗೆ ಶನಿವಾರ ಪ್ರಧಾನಿ ಮೋದಿ ಹಸಿರು ನಿಶಾನೆ ತೋರಿಸಿರುವಂತೆಯೇ ಉಡುಪಿಯ ಸ್ಯಾಂಡ್ ಥೀಮ್ ಕಲಾವಿದರು ಮರಳು ಶಿಲ್ಪ ರಚಿಸುವ ಮೂಲಕ ಲಸಿಕೆಯನ್ನು ಸ್ವಾಗತಿಸಿದರು.
ಕಲಾವಿದರಾದ ಹರೀಶ್ ಸಾಗಾ, ರಾಘವೇಂದ್ರ, ಜೈ ನೇರಳಕಟ್ಟೆ ಅವರು ಕೋಟೇಶ್ವರ ಹಳೆ ಅಳಿವೆಕೋಡಿ ಬೀಚ್ನಲ್ಲಿ 7 ಮೀ. ಅಡಿ ಅಗಲ ಮತ್ತು 4 ಅಡಿ ಎತ್ತರದ ಮರಳು ಶಿಲ್ಪ ರಚಿಸಿ, ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು