Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕೃಷ್ಣಮಠಕ್ಕೆ ಎಡನೀರುಶ್ರೀ ಪ್ರಥಮ ಭೇಟಿ

ಕೃಷ್ಣಮಠಕ್ಕೆ ಎಡನೀರುಶ್ರೀ ಪ್ರಥಮ ಭೇಟಿ

ಉಡುಪಿ: ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಮಂಗಳವಾರ ಇಲ್ಲಿನ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು. ಮಠದ ನೂತನ ಯತಿಯಾದ ಬಳಿಕ ಅವರು ಉಡುಪಿಗೆ ನೀಡುತ್ತಿರುವ ಪ್ರಥಮ ಭೇಟಿ ಇದಾಗಿದೆ.
ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಶ್ರೀಗಳನ್ನು ಗೌರವದಿಂದ ಬರಮಾಡಿಕೊಂಡು ಕೃಷ್ಣ ದರ್ಶನ ಮಾಡಿಸಿದರು.

ಚಾತುರ್ಮಾಸ ವ್ರತ ಕೈಗೊಳ್ಳುವ ಮುನ್ನ ಶ್ರೀಕೃಷ್ಣ ದರ್ಶನ ಪಡೆದಿರುವುದು ಸಂತೋಷವಾಯಿತು ಎಂದರು.

ಮಠದ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ ಸ್ವಾಗತಿಸಿದರು. ಆಸ್ಥಾನ ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಆಚಾರ್ಯ ನಿರೂಪಿಸಿದರು. ಮಠದ ಪ್ರಧಾನ ವ್ಯವಸ್ಥಾಪಕ ಗೋವಿಂದರಾಜ್ ವಂದಿಸಿದರು. ಪಿ.ಆರ್.ಓ ಶ್ರೀಶ ಕಡೆಕಾರ್ ಹಾಗೂ ಶ್ರೀಕೃಷ್ಣ ಸೇವಾ ಬಳಗದ ಸದಸ್ಯರು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!