ಉಡುಪಿ: ನವದೆಹಲಿ ರಾಷ್ಟ್ರೀಯ ಮೀನುಗಾರರ ಸಂಘದ ರಾಜ್ಯ ಉಪಾಧ್ಯಕ್ಷರಾಗಿ ಯೋಗೇಶ್ ಶಿರೂರು ಆಯ್ಕೆಯಾಗಿದ್ದಾರೆ.
ಮೀನುಗಾರರ ಪರವಾಗಿ ಕಳೆದ ಹಲವಾರು ವರ್ಷಗಳಿಂದ ಧ್ವನಿ ಎತ್ತಿರುವ ಬೈಂದೂರು ತಾಲೂಕಿನ ಪತ್ರಕರ್ತ, ಯುವ ಹೋರಾಟಗಾರ, ಮೊಗವೀರ ಸಮಾಜದ ಯೋಗೇಶ್ ಶಿರೂರು ಅವರನ್ನು ಮಾಜಿ ಶಾಸಕ ಹಾಗೂ ಸಂಘದ ರಾಷ್ಟ್ರೀಯ ಅಧ್ಯಕ್ಷ ಯು. ಆರ್. ಸಭಾಪತಿ ಶಿಫಾರಸಿನ ಮೇರೆಗೆ ರಾಜ್ಯಾಧ್ಯಕ್ಷ ರಾಮ ಮೊಗೇರ ಆಯ್ಕೆ ಮಾಡಿರುವುದಾಗಿ ಪ್ರಕಟಣೆ ತಿಳಿಸಿದೆ