ಸುದ್ದಿಕಿರಣ ವರದಿ
ಸೋಮವಾರ, ಮೇ 23
ಐವರು ಮೀನುಗಾರರ ರಕ್ಷಣೆ
ಬೈಂದೂರು: ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಸಮುದ್ರದ ಅಲೆಗೆ ಸಿಲುಕಿ ಮುಳುಗಡೆಯಾದ ಘಟನೆ ಸಂಭವಿಸಿದೆ.
ದೋಣಿಯಲ್ಲಿದ್ದ ಎಲ್ಲಾ ಐದು ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.
ಶಿರೂರು ನಾಖುದಾ ಮೊಹಲ್ಲಾದಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ಬೀಬಿ ಅಮೀನಾ ಹೆಸರಿನ ದೋಣಿ ಸಮುದ್ರದ ಅಲೆಗೆ ಸಿಲುಕಿ ಮುಳುಗಿದೆ ಎನ್ನಲಾಗಿದೆ.
ಮೀನುಗಾರರಾದ ಸದ್ಕೆ ಮುಷ್ತಾಕ್, ರೋಗೆ ಅಬೂಬಕ್ಕರ್, ಭೋಂಬಾ ಮೀರಾ, ದಾಂಡಯ್ಯ ಅಶ್ರಫ್ ಮತ್ತು ಬೋಡರ್ನಿ ಶಬ್ಬೀರ್ ಎಂಬವರನ್ನು ರಕ್ಷಿಸಲಾಗಿದೆ.