Thursday, July 7, 2022
Home Uncategorized ಕೊರಗ ಕಾಲನಿ ನಿವಾಸಿಗಳಿಗೆ ಕೃಷ್ಣಮಠದಿಂದ ಊಟದ ವ್ಯವಸ್ಥೆ

ಕೊರಗ ಕಾಲನಿ ನಿವಾಸಿಗಳಿಗೆ ಕೃಷ್ಣಮಠದಿಂದ ಊಟದ ವ್ಯವಸ್ಥೆ

ಉಡುಪಿ: ಕೊರೊನಾ ಲಾಕ್ ಡೌನ್ ನಿಂದ ಬಹಳಷ್ಟು ತೊಂದರೆಗೊಳಗಾದ ಮಣಿಪಾಲ ಸರಳೇಬೆಟ್ಟು ವಿಜಯನಗರ ಕೊರಗರ ಕಾಲನಿಯ 60 ಕುಟುಂಬಗಳಿಗೆ ಪರ್ಯಾಯ ಅದಮಾರು ಶ್ರೀ ಈಶ್ರಪ್ರಿಯತೀರ್ಥ ಶ್ರೀಪಾದರು ಊಟದ ವ್ಯವಸ್ಥೆ ಕಲ್ಪಿಸಿದ್ದು, ಶ್ರೀಕೃಷ್ಣ ಮಠ ವತಿಯಿಂದ ಹೋಮ್ ಡಾಕ್ಟರ್ ಫೌಂಡೇಶನ್ ಸಹಕಾರದೊಂದಿಗೆ ವಿತರಿಸಲಾಯಿತು.

15 ಕುಟುಂಬದ ಸುಮಾರು 80 ಮಂದಿಗೆ ಗುರುವಾರದಿಂದ ಊಟ ಒದಗಿಸಲಾಗಿದ್ದು, ಲಾಕ್ ಡೌನ್ ಮುಗಿಯುವರೆಗೆ ಇದು ಮುಂದುವರಿಯಲಿದೆ.

ಈ ಸಂದರ್ಭದಲ್ಲಿ ಶ್ರೀಕೃಷ್ಣ ಮಠದ ವ್ಯವಸ್ಥಾಪಕ ಗೋವಿಂದರಾಜ್, ಶ್ರೀಕೃಷ್ಣ ಸೇವಾ ಬಳಗದ ಪ್ರದೀಪ್ ಮತ್ತು ವೈ. ಎನ್. ರಾಮಚಂದ್ರ ರಾವ್, ಹೋಮ್ ಡಾಕ್ಟರ್ ಫೌಂಡೇಶನ್ ಸದಸ್ಯರಾದ ಡಾ. ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ನಗರಸಭಾ ಸದಸ್ಯೆ ವಿಜಯಲಕ್ಷ್ಮಿ, ಸ್ಪಂದನ ವಿಶೇಷ ಶಾಲೆ ಪ್ರಾಂಶುಪಾಲ ಜನಾರ್ದನ್, ಸವಿತಾ ಶೆಟ್ಟಿ, ಗಣೇಶ್, ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!