Wednesday, August 10, 2022
Home Uncategorized ಧರ್ಮ ರಕ್ಷಣೆಗೆ ಸಿದ್ಧರಿರಲು ಕರೆ

ಧರ್ಮ ರಕ್ಷಣೆಗೆ ಸಿದ್ಧರಿರಲು ಕರೆ

ಧರ್ಮ ರಕ್ಷಣೆಗೆ ಸಿದ್ಧರಿರಲು ಕರೆ

ಉಡುಪಿ, ಡಿ. 6 (ಸುದ್ದಿಕಿರಣ ವರದಿ): ರಾಜನೋರ್ವ ತನ್ನ ರಾಜ್ಯದ ರಕ್ಷಣೆಗೆ ಸಮರ್ಥ ಸೈನ್ಯ ಸಿದ್ಧಪಡಿಸಿದಂತೆ ಹಿಂದೂ ಧರ್ಮದ ರಕ್ಷಣೆಗೆ ಕಟಿಬದ್ಧರಾಗಿರಬೇಕು ಎಂದು ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹೇಳಿದರು.

ಅದಮಾರು ನರಸಿಂಹತೀರ್ಥ ಸಂಸ್ಥಾನದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಪ್ರಿಯ ಶಿಷ್ಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರ ಪ್ರಥಮ ಪರ್ಯಾಯಾವಧಿಯ ದೀಕ್ಷಾ ಸಮಾಪನ ವಿಶ್ವಾರ್ಪಣಮ್ ಎರಡನೇ ದಿನದ ಕಾರ್ಯಕ್ರಮದಲ್ಲಿ ಸೋಮವಾರ ಆಶೀರ್ವಚನ ನೀಡಿದರು.

ಕರ್ತವ್ಯ ಪಾಲಿಸಿ
ಸಾನ್ನಿಧ್ಯ ವಹಿಸಿದ್ದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಧರ್ಮಾಚರಣೆಯೊಂದಿಗೆ ಕರ್ತವ್ಯ ನಿರ್ವಹಿಸಬೇಕು.

ನಮ್ಮ ಧರ್ಮದ ಬಗ್ಗೆ ಅಭಿಮಾನ ಬೇಕು. ಎಲ್ಲ ಕಡೆಗಳಿಂದಲೂ ಎಲ್ಲರಿಂದಲೂ ಹಿಂದೂ ಧರ್ಮದ ಬಗ್ಗೆ ಟೀಕೆ, ಅಭದ್ರತೆ ಮೂಡಿಸುವ ಈ ದಿನಗಳಲ್ಲಿ ಪ್ರತಿಯೊಂದು ಮನೆಗಳಲ್ಲೂ ಹಿಂದೂ ಸೈನಿಕ ಹುಟ್ಟಿ ಬೆಳೆದು ನಮ್ಮ ನಾಡು ರಾಮ ರಾಜ್ಯವಾಗುವಲ್ಲಿ ಕೈಜೋಡಿಸಬೇಕು ಎಂದು ಆಶಿಸಿದರು.

ವಿಶೇಷ ಉಪನ್ಯಾಸ
ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹಿಂದೂ ಅಸ್ಮಿತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಕಟೀಲು ಕ್ಷೇತ್ರದ ಆನುವಂಶಿಕ ಮೊಕ್ತೇಸರ ಮತ್ತು ಅರ್ಚಕ ವಾಸುದೇವ ಆಸ್ರಣ್ಣ ಹಾಗೂ ಅರ್ಚಕ ವೆಂಕಟರಮಣ ಆಸ್ರಣ್ಣ ಅಭ್ಯಾಗತರಾಗಿದ್ದರು.

ಸನ್ಮಾನ
ಈ ಸಂದರ್ಭದಲ್ಲಿ ಅದಮಾರು ಮಠದ ಸೇವಕ ಎ. ವೆಂಕಟೇಶ ಮತ್ತು ಗ್ರಾಮೀಣ ಅಂಚೆ ಪೇದೆ ಪ್ರದೀಪ್ ಕುಮಾರ್ ಅವರನ್ನು ಸನ್ಮಾನಿಸಿದರು.

ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಭಟ್ ನಿರೂಪಿಸಿದರು.

ಸಿತಾರ್- ಪಿಟೀಲು ವಾದನ
ಬಳಿಕ ಮುಂಬೈ ಪೂರ್ಬಯನ್ ಚಟರ್ಜಿ ಮತ್ತು ಬೆಂಗಳೂರು ಅಂಬಿ ಸುಬ್ರಹ್ಮಣ್ಯನ್ ಅವರಿಂದ ಸಿತಾರ್ ಮತ್ತು ಪಿಟೀಲು ಜುಗಲ್ ಬಂಧಿ ಕಾರ್ಯಕ್ರಮ ನಡೆಯಿತ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!