Monday, July 4, 2022
Home Uncategorized ಪಲ್ಸ್ ಆಕ್ಸಿಮೀಟರ್ ಕೊಡುಗೆ

ಪಲ್ಸ್ ಆಕ್ಸಿಮೀಟರ್ ಕೊಡುಗೆ

ಉಡುಪಿ: ರೋಟರಿ ಉಡುಪಿ ಮತ್ತು ಮಣಿಪಾಲ ಟೌನ್ ಕ್ಲಬ್ ಆಶ್ರಯದಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶದ ಕೋವಿಡ್ ರೋಗಿಗಳ ಉಪಯೋಗಕ್ಕಾಗಿ 125 ಪಲ್ಸ್ ಆಕ್ಸಿಮೀಟರ್ ಗಳನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಅವರಿಗೆ ಹಸ್ತಾಂತರಿಸಲಾಯಿತು.

ರೋಟರಿ ಜಿಲ್ಲಾ ಗವರ್ನರ್ ರಾಜಾರಾಮ ಭಟ್ ಹಸ್ತಾಂತರಿಸಿದರು.

ಉಪಕರಣ ಸ್ವೀಕರಿಸಿದ ಡಾ. ನವೀನ್ ಭಟ್, ರೋಟರಿ ಕೊಡುಗೆ ಶ್ಲಾಘಿಸಿದರು. ಕೊರೊನಾ ನಿಯಂತ್ರಣ ಅಭಿಯಾನದಲ್ಲಿ ರೋಟರಿ ಸಂಸ್ಥೆಗಳು ಇನ್ನಷ್ಟು ಭಾಗವಹಿಸಬೇಕು ಎಂದು ವಿನಂತಿಸಿದರು.

ಉಡುಪಿ ಜಿಲ್ಲೆಯಲ್ಲಿ ರೋಟರಿ ಸಂಸ್ಥೆಯನ್ನು ನೋಡಲ್ ಸ್ವಯಂ ಸೇವಾಸಂಸ್ಥೆ ಎಂದು ನಿಯಮಿಸಿದ್ದು, ಅವರಿಂದ ಉತ್ತಮ ಕಾರ್ಯ ನಡೆಯುತ್ತಿದೆ ಎಂದರು.

ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿ ಡಾ. ಸುರೇಶ ಶೆಣೈ, ರೋಟರಿ ಕೋವಿಡ್ ನೋಡಲ್ ಅಧಿಕಾರಿ ಡಾ. ಪ್ರಭಾಕರ ಮಲ್ಯ, ರೋಟರಿ ಉಡುಪಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ, ಮಣಿಪಾಲ ಟೌನ್ ಅಧ್ಯಕ್ಷ ರವೀಂದ್ರನಾಥ ನಾಯಕ್, ಬಿ. ವಿ. ಲಕ್ಷ್ಮೀನಾರಾಯಣ, ರಾಮಚಂದ್ರ ಉಪಾಧ್ಯಾಯ, ಗಣೇಶ್ ನಾಯಕ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!