ಉಡುಪಿ: ಭಾರತೀಯ ರೆಡ್ ಕ್ರಾಸ್ ಸೊಸೈಟಿ ಉಡುಪಿ ಶಾಖೆ ವತಿಯಿಂದ ಮಂಗಳೂರು ವಿಮಾನ ನಿಲ್ದಾಣದ ಸಿಬಂದಿ ವರ್ಗದವರಿಗೆ ಹಮ್ಮಿಕೊಂಡ 3 ದಿನಗಳವಧಿಯ ಪ್ರಥಮ ಚಿಕಿತ್ಸಾ ಶಿಬಿರವನ್ನು ಆರೋಗ್ಯ ಸಚಿವ ಡಾ. ಸುಧಾಕರ್ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಕಾರ್ಯ ಸಂಘಟಿಸಿದ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯನ್ನು ಶ್ಲಾಘಿಸಿದರು.
ಉಡುಪಿ ರೆಡ್ ಕ್ರಾಸ್ ಸಭಾಪತಿ ಡಾ| ತಲ್ಲೂರು ಶಿವರಾಮ ಶೆಟ್ಟಿ, ಗೌರವ ಕಾರ್ಯದರ್ಶಿ ಕೆ. ಜಯರಾಮ ಆಚಾರ್ಯ ಸಾಲಿಗ್ರಾಮ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಉಡುಪಿ ಶಾಸಕ ರಘುಪತಿ ಭಟ್, ರೆಡ್ ಕ್ರಾಸ್ ಸದಸ್ಯ ಡಾ. ಅವೀನ್ ಆಳ್ವ ಇದ್ದರು.
ತರಬೇತುದಾರರಾಗಿ ಮಂಗಳೂರಿನ ಅಶ್ವಿನ್ ಕುಮಾರ್ ಹಾಗೂ ಗ್ಲೋರಿಯಾ ಜೆನಿಫರ್ ಭಾಗಹಿಸಿದ್ದರು.