Wednesday, July 6, 2022
Home Uncategorized ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಿಸುವಲ್ಲಿ ಅಳಿಲುಸೇವೆ

ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಿಸುವಲ್ಲಿ ಅಳಿಲುಸೇವೆ

ಸುದ್ದಿಕಿರಣ ವರದಿ
ಮಂಗಳವಾರ, ಮೇ 10

ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೇರಿಸುವಲ್ಲಿ ಅಳಿಲುಸೇವೆ
ಉಡುಪಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೇರಿಸುವಲ್ಲಿ ಅಳಿಲು ಸೇವೆ ಸಲ್ಲಿಸುವುದಾಗಿ ಪ್ರಮೋದ್ ಮಧ್ವರಾಜ್ ಪುನರುಚ್ಚರಿಸಿದರು.

ಈಚೆಗೆ ಬಿಜೆಪಿ ಸೇರ್ಪಡೆಗೊಂಡ ಬಳಿಕ ಮಂಗಳವಾರ ಮೊದಲ ಬಾರಿಗೆ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾನು ಯಾವುದೇ ಆಕಾಂಕ್ಷೆಯಿಂದ ಬಿಜೆಪಿ ಸೇರಿದ್ದಲ್ಲ.

ಆದರೂ ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ತಿಳಿಸಿದರು.

ಉಸಿರು ಕಟ್ಟಿಸುವ ಸ್ಥಿತಿ
2018ರಲ್ಲಿ ತಾನು ಸಚಿವನಾಗಿದ್ದಾಗ `ಸಾಕಷ್ಟು ಅವಕಾಶ ನೀಡಿದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದಲ್ಲಿ ನನ್ನಷ್ಟು ಸ್ವಾರ್ಥಿ ಮತ್ತೊಬ್ಬನಿರಲಾರ’ ಎಂದು ಹೇಳಿರುವುದು ನಿಜ. ಆದರೆ, ಅದು ಅಂದಿನ ಮಾತು.

ಇಂದು ಉಡುಪಿ ಜಿಲ್ಲೆಯಲ್ಲಿ ಉಸಿರು ಕಟ್ಟಿಸುವ ಸ್ಥಿತಿ ಕಾಂಗ್ರೆಸ್ ನಲ್ಲಿದೆ. ಅದನ್ನು ಸರಿಪಡಿಸಲು ಪಕ್ಷ ವರಿಷ್ಠರಲ್ಲಿ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಾನು ಪಕ್ಷ ಬಿಡುವ ಯೋಚನೆ ಮಾಡಬೇಕಾಯಿತು ಎಂದರು.

ಹಳ್ಳಿ ರಾಜಕಾರಣ ಇಷ್ಟ
ಇದೀಗ ಕಾಂಗ್ರೆಸಿಗರೇ ಪ್ರಮೋದ್ ಅನ್ ಪಾಪ್ಯುಲರ್ ಲೀಡರ್ ಎಂದು ಹೇಳಿಕೊಳ್ಳುವ ಬಗ್ಗೆ ಪ್ರಸ್ತಾಪಿಸಿದಾಗ, ಅದು ಸಹಜವಾಗಿ ಕಾರ್ಯಕರ್ತರ ವೇದನೆಯ ಮಾತು. ಇಂಥದೆಲ್ಲ ಸಾಮಾನ್ಯ ಎಂದರು.

ತನ್ನ ಬೆಂಬಲಿಗರು ಬಿಜೆಪಿ ಸೇರುವ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಆದರೆ, ಆ ಕುರಿತು ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ನಿರ್ಧರಿಸಬೇಕಾಗಿದೆ ಎಂದರು.

ತಾನು ರಾಜ್ಯ ಅಥವಾ ರಾಷ್ಟ್ರ ರಾಜಕಾರಣಕ್ಕಿಂತ ಹಳ್ಳಿ ರಾಜಕಾರಣದತ್ತಲೇ ಹೆಚ್ಚು ಆಸಕ್ತ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!