Tuesday, May 17, 2022
Home Uncategorized ಭಜನೆ ಡಿವಿಡಿ ಬಿಡುಗಡೆ

ಭಜನೆ ಡಿವಿಡಿ ಬಿಡುಗಡೆ

ಭಜನೆ ಡಿವಿಡಿ ಬಿಡುಗಡೆ
(ಸುದ್ದಿಕಿರಣ ವರದಿ)

ಉಡುಪಿ: ಇಲ್ಲಿನ ಜಿ.ಎಸ್.ಬಿ. ಸಮಾಜದ ಹತ್ತು ಸಮಸ್ತರು ಒಟ್ಟಾಗಿ ಘರ್ ಘರಾಂತು ಭಜನಾ ತರಂಗ (ಮನೆ ಮನೆಯಲ್ಲಿ ಭಜನಾ ತರಂಗ) ಶೀರ್ಷಿಕೆಯಡಿ ಪ್ರಾರಂಭಗೊಂಡು ಪ್ರತೀ ಭಾನುವಾರ ವಿವಿಧ ಮನೆಗಳಲ್ಲಿ ನಡೆಯುತ್ತಿದ್ದ ಹರಿ ನಾಮ ಸಂಕೀರ್ತನೆಯ 100ನೇ ವಾರದ ಕಾರ್ಯಕ್ರಮದ ವೀಡಿಯೊ ಡಿವಿಡಿ ಬಿಡುಗಡೆ ಇಲ್ಲಿನ ವಳಕಾಡು ಅನಂತ ನಿಲಯ ಕೇಂದ್ರದಲ್ಲಿ ನಡೆಯಿತು.

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ, ನಟ, ನಿರ್ದೇಶಕ ಕಾಸರಗೋಡು ಚಿನ್ನಾ ಬಿಡುಗಡೆಗೊಳಿಸಿದರು.

ಚೇಂಪಿ ರಾಮಚಂದ್ರ ಅನಂತ ಭಟ್, ಕಲಾಪೋಷಕ, ಕಲಾವಿದ ಟಿ. ರಂಗ ಪೈ, ವಕೀಲ ಲಕ್ಷ್ಮಣ ಶೆಣೈ, ಶಶಿಭೂಷಣ ಕಿಣಿ, ರವೀಂದ್ರ ಪ್ರಭು ಮೂಲ್ಕಿ, ಭಜನಾ ಮಂಡಳಿಯ ನಿತ್ಯಾನಂದ ನಾಯಕ್, ಶಾಂತಾರಾಮ ಪೈ, ಶೈಲಾ ಕಾಮತ್, ಅಚ್ಚುತ ಶೆಣೈ, ಪುರಂದರ ಕಿಣಿ, ಗೋಕುಲದಾಸ ಕಾಮತ್, ಛಾಯಾಗ್ರಾಹಕ ದೇವದಾಸ ಕಾಮತ್, ವಿವಿಧ ಭಜನಾ ಮಂಡಳಿಯ ಸದಸ್ಯರು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!