ಉಡುಪಿ: ಈ ಹಿಂದೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಬೆಳ್ಳಂಪಳ್ಳಿ ದಿಲ್ಲೇಶ ಶೆಟ್ಟಿ ಈಚೆಗೆ ಬಿಜೆಪಿ ಸೇರ್ಪಡೆಗೊಂಡರು.
ತನ್ನ ಕಾಲೇಜು ಜೀವನದಿಂದಲೂ ಈಚಿನ ವರೆಗೆ ಜೆ.ಡಿ.ಎಸ್.ನಲ್ಲಿ ವಿವಿಧ ಹುದ್ದೆಗಳಲ್ಲಿ ತೊಡಗಿಕೊಂಡು ಪಕ್ಷನಿಷ್ಠೆ ತೋರಿದ್ದ ದಿಲ್ಲೇಶ ಶೆಟ್ಟಿ ಉತ್ತಮ ಸಂಘಟಕ ಎಂಬ ಗೌರವಕ್ಕೆ ಪಾತ್ರರಾಗಿದ್ದರು.
ಆದರೆ, ಈಚಿನ ದಿನಗಳಲ್ಲಿ ಜೆಡಿಎಸ್, ಉಡುಪಿ- ಮಂಗಳೂರು ಭಾಗವನ್ನು ಕಡೆಗಣಿಸಿರುವ ಹಿನ್ನೆಲೆಯಲ್ಲಿ ನೊಂದು ಪಕ್ಷದ ಎಲ್ಲಾ ಹದ್ದೆಗಳಿಗೆ ರಾಜೀನಾಮೆ ನೀಡಿದರು.
ಬಳಿಕ ಬಿಜೆಪಿ ಸೇರ್ಪಡೆಗೊಂಡರು. ದಿಲ್ಲೇಶ ಶೆಟ್ಟಿ ಅವರ ವರ್ಚಸ್ಸನ್ನು ಗುರುತಿಸಿದ್ದ ಕಾರ್ಕಳ ಶಾಸಕ ಸುನಿಲ್ ಕುಮಾರ್, ದಿಲ್ಲೇಶ ಶೆಟ್ಟಿ ಅವರಿಗೆ ಪಕ್ಷದ ಧ್ವಜ ನೀಡುವ ಮೂಲಕ ಅಧಿಕೃತವಾಗಿ ಜಿಲ್ಲಾ ಬಿಜೆಪಿಗೆ ಸೇರ್ಪಡೆಗೊಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಗೃಹಮಂತ್ರಿ ಬಸವರಾಜ ಬೊಮ್ಮಾಯಿ ಸಂಸದೆ ಶೋಭಾ ಕರಂದ್ಲಾಜೆ ಮೊದಲಾದವರ ಮೆಚ್ಚುಗೆಗೆ ಪಾತ್ರರಾದರು.
ದಿಲ್ಲೇಶ ಭರವಸೆಯ ನಾಯಕನಾಗಿದ್ದು ಕಾಲೇಜು ದಿನಗಳಿಂದಲೇ ರಾಜಕೀಯದಲ್ಲಿ ಗುರುತಿಸಿಕೊಂಡು ಸಹಾಯ ಕೇಳಿ ಬಂದವರಿಗೆ ಹಾಗೂ ಯುವಜನತೆಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಜಿಲ್ಲಾದ್ಯಂತ ತನ್ನದೇ ಆದ ಬೆಂಬಲಿಗರ ಪಡೆ ಹೊಂದಿರುವ ಶೆಟ್ಟಿ, ಬಿಜೆಪಿಯ ಅತ್ಯಂತ ಕ್ರಿಯಾಶೀಲ ನಾಯಕನಾಗಿ ಬೆಳೆಯುವುದರಲ್ಲಿ ಸಂದೇಹವಿಲ್ಲ. ಪಕ್ಷ ಕೊಟ್ಟ ಜವಾಬ್ದಾರಿಗೆ ನಿಷ್ಟರಾಗಿ ಜನಸಾಮಾನ್ಯರ ನಾಯಕನಾಗಿ ಬೆಳೆಯುವಲ್ಲಿ ಸಂದೇಹವಿಲ್ಲ