Monday, July 4, 2022
Home Uncategorized ಐತಿಹಾಸಿಕ ದಾಖಲಾತಿ ಸಂಗ್ರಾಹಕರಿಗೆ ಗೌರವಾರ್ಪಣೆ

ಐತಿಹಾಸಿಕ ದಾಖಲಾತಿ ಸಂಗ್ರಾಹಕರಿಗೆ ಗೌರವಾರ್ಪಣೆ

ಐತಿಹಾಸಿಕ ದಾಖಲಾತಿ ಸಂಗ್ರಾಹಕರಿಗೆ ಗೌರವಾರ್ಪಣೆ

(ಸುದ್ದಿಕಿರಣ ವರದಿ)
ಉಡುಪಿ: 1947ರರ ಅಗೋಸ್ತು 15ರಂದು ಸ್ವಾತಂತ್ರ್ಯ ದೊರಕಿದ ಸಂಭ್ರಮಾಚರಣೆಯ ಭಿತ್ತಿಪತ್ರ ಹಾಗೂ ಛಾಯಾಚಿತ್ರ ಮೊದಲಾದ ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸಿಕೊಂಡು ಬಂದಿರುವ ಇಲ್ಲಿನ ಐಡಿಯಲ್ ಸ್ಟುಡಿಯೊ ಮಾಲಕರಾದ ರಮೇಶ ನಾಯಕ್ ಮತ್ತು ಶಿವಾನಂದ ನಾಯಕ್ ಅವರನ್ನು ಸ್ವಾತಂತ್ರ್ಯ ದಿನಾಚರಣೆ ಅಮೃತ ಮಹೋತ್ಸವ ಸಂದರ್ಭದಲ್ಲಿ ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಗೌರವಿಸಲಾಯಿತು.

ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಸನ್ಮಾನಿಸಿದರು.

ಇದೇ ಸಂದರ್ಭದಲ್ಲಿ ಸಂಶೋಧಕ ಪ್ರೊ. ಕೃಷ್ಣಯ್ಯ ಅವರು ನಮ್ಮ ಪುರಾಣಗಳಲ್ಲಿ ಪಂಚವಟಿಯಲ್ಲಿತ್ತು ಎನ್ನಲಾದ 64 ವರ್ಷಕ್ಕೊಮ್ಮೆ ಹೂ, ಕಾಯಿ ಬಿಡುವ ಅಪರೂಪದ ಔಷಧೀಯ ತಳಿ ಶ್ರೀತಾಳೆ 75 ಗಿಡಗಳನ್ನು ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಗೌರವ ಅಧ್ಯಕ್ಷ ಯು. ವಿಶ್ವನಾಥ ಶೆಣೈ ಹಾಗೂ ಅಧ್ಯಕ್ಷ ಪ್ರೊಫೆಸರ್ ಶಂಕರ್ ಅವರಿಗೆ ನೀಡಿದರು.

ಇದೇ ಸಂದರ್ಭದಲ್ಲಿ ಇತಿಹಾಸತಜ್ಞ ಶ್ರೀಧರ ಭಟ್ ಅವರು ಕೊಂಕಣಿ ತರ್ಜುಮೆಯ ಭಿತ್ತಿಪತ್ರ ವಾಚಿಸಿದರು.

ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಗೀತಂ ಗಿರೀಶ್ ಸ್ವಾಗತಿಸಿದರು. ಉಪಾಧ್ಯಕ್ಷೆ ಸಂಧ್ಯಾ ಶೆಣೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮರವಂತೆ ನಾಗರಾಜ್ ಹೆಬ್ಬಾರ್ ವಂದಿಸಿದರು. ಸಂಚಾಲಕ ರವಿರಾಜ್ ಎಚ್. ಪಿ. ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!