ಉಡುಪಿ: ಜಿಲ್ಲಾಡಳಿತದ ಸಹಕಾರದೊಂದಿಗೆ ಶಾಸಕ ರಘುಪತಿ ಭಟ್ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆ ಸಹಕಾರದೊಂದಿಗೆ ವಲಸೆ ಕಾರ್ಮಿಕರಿಗೆ ಉಚಿತ ಕೊರೊನಾ ತಪಾಸಣೆ ನಡೆಸಲಾಯಿತು.
ನಗರದ ವಳಕಾಡು ವಾರ್ಡ್ ನಗರಸಭಾ ಸದಸ್ಯೆ ರಜನಿ ಹೆಬ್ಬಾರ್ ಉಪಸ್ಥಿತಿಯಲ್ಲಿ ಬೀಡಿನಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಕಳೆದ 1 ವಾರದಿಂದ ಪ್ರತಿದಿನ ಗಂಟಲು ಮತ್ತು ಮೂಗಿನ ದ್ರವ ಸಂಗ್ರಹಣೆ ಮಾಡಲಾಗುತ್ತಿದೆ.
ಇದುವರೆಗೆ ಸುಮಾರು 1,350ಕ್ಕೂ ಹೆಚ್ಚಿನ ಜನರ ತಪಾಸಣೆ ನಡೆಸಲಾಗಿದೆ. ಆ ಪೈಕಿ ಪಾಸಿಟಿವ್ ಬಂದ 35 ಮಂದಿಯನ್ನು ಚಿಕಿತ್ಸೆಗೊಳಪಡಿಸಲಾಗಿದ್ದು, ಅವರು ಗುಣಮುಖರಾಗುತ್ತಿದ್ದಾರೆ.
ಆರೋಗ್ಯ ಇಲಾಖೆ ಲ್ಯಾಬ್ ಟೆಕ್ನೀಶಿಯನ್ ಪ್ರಮೋದ್, ಕಿರಣ್ ಕುಮಾರ್, ಸುಧಾ, ರಶ್ಮಿತ, ಮೀನಾಕ್ಷಿ, ಆಶಾ ಕಾರ್ಯಕರ್ತೆಯರಾದ ಹಿಮಾ ಮತ್ತು ಚಂದ್ರಾವತಿ, ಅಂಗನವಾಡಿ ಶಿಕ್ಷಕಿ ಪೂರ್ಣಿಮಾ, ಪ್ರೇಮ, ಅಸಿಯಾ ಬಾನು, ಪೊಲೀಸ್ ಅಧಿಕಾರಿ ಪ್ರಮೋದ್ ಕುಮಾರ್, ಉದ್ಯಮಿ ಮಂಜುನಾಥ ಹೆಬ್ಬಾರ್ ಇದ್ದರು.