Thursday, July 7, 2022
Home ಲೋಕಾಭಿರಾಮ ಕಾರ್ಮಿಕರಿಗೆ ಉಚಿತ ಲಸಿಕೆ

ಕಾರ್ಮಿಕರಿಗೆ ಉಚಿತ ಲಸಿಕೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಪದವು ಸೆಂಟ್ರಲ್ ವಾರ್ಡ್ ರಾಜೀವ ನಗರದಲ್ಲಿ ಕಾರ್ಮಿಕರಿಗೆ ಉಚಿತ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ರಾಜೀವ ನಗರದಲ್ಲಿ ಕಾರ್ಮಿಕರಿಗಾಗಿ ಉಚಿತ ಲಸಿಕೆ ವಿತರಿಸಲಾಗುತ್ತಿದ್ದು, ಅರ್ಹರು ಲಸಿಕೆ ಪಡೆದುಕೊಳ್ಳಬೇಕು. ಲಾಕ್ ಡೌನ್ ಸಡಿಲಗೊಳಿಸಿದರೂ ಸ್ವಲ್ಪ ಸಮಯದ ವರೆಗೆ ಆರೋಗ್ಯದ ಹಿತದೃಷ್ಟಿಯಿಂದ ವ್ಯಕ್ತಿಗತ ಅಂತರ ಕಾಪಾಡಿಕೊಂಡು ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂದರು.

ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೊರೇಟರ್ ಕಿಶೋರ್ ಕೊಟ್ಟಾರಿ, ವೈದ್ಯಾಧಿಕಾರಿ ಡಾ. ದೀಪ್ತಿ, ಪ್ರಮುಖರಾದ ನೀಲೇಶ್ ಕಾಮತ್, ವಾಸುದೇವ, ಅಶ್ವಿತ್ ಕೊಟ್ಟಾರಿ, ಹರೀಶ್ ರೈ, ರೀತೇಶ್, ಉಮೇಶ್, ಚಂದ್ರ, ಮಣಿ, ಮಾಧವ ಭಟ್, ದೇವಿ ಪ್ರಸಾದ್, ಮೋಹಿತ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!