Thursday, July 7, 2022
Home ಲೋಕಾಭಿರಾಮ `ಕೊರೊನಾಕ್ಕೆ ಹೆದರುವುದಲ್ಲ, ಎದುರಿಸಿ'

`ಕೊರೊನಾಕ್ಕೆ ಹೆದರುವುದಲ್ಲ, ಎದುರಿಸಿ’

ಉಡುಪಿ: ಅತ್ಯಂತ ದುರ್ಬಲ ವೈರಸ್ ನಿಂದ ಬಂದಿರುವ ಕೊರೊನಾದಿಂದಾಗಿ ವಿಶ್ವದ ಆರ್ಥಿಕತೆ ಸೇರಿದಂತೆ ಎಲ್ಲ ಕ್ಷೇತ್ರಗಳೂ ಸ್ತಬ್ಧವಾಗಿದ್ದು, ಸೋಂಕು ನಿರ್ವಹಣೆಯಲ್ಲಿ ಸರ್ಕಾರಗಳು ತಳೆದ ನಿಲುವು ಸರಿಯಲ್ಲ ಎಂದು ಸ್ವತಃ ಆಯುರ್ವೇದ ವೈದ್ಯ ಹಾಗೂ ಶಿಕ್ಷಣ ತಜ್ಞ ಡಾ. ಮೋಹನ ಆಳ್ವ ಖೇದ ವ್ಯಕ್ತಪಡಿಸಿದರು.

ಉಡುಪಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನಮ್ಮ ಜೀವನದಲ್ಲಿ ಅದೆಷ್ಟೋ ವೈರಸ್ ಗಳಿಂದ ವಿವಿಧ ರೀತಿಯ ಕಾಯಿಲೆಗಳು ಬಂದು ಹೋಗುತ್ತವೆ. ಅದಕ್ಕೆ ಹೆದರಿ, ನಮ್ಮ ರೋಗ ನಿರೋಧಕ ಶಕ್ತಿಯನ್ನೇ ಬಲಿಕೊಡುವುದು ಸರಿಯಲ್ಲ. ಕೊರೊನಾ ಕಾರಣದಿಂದಾಗಿ ಶಾಲಾ ಕಾಲೇಜುಗಳನ್ನು ಬಂದ್ ಮಾಡುವ ಸರ್ಕಾರದ ನಿರ್ಧಾರ ಸರ್ವಥಾ ಸಮರ್ಥನೀಯವಲ್ಲ ಎಂದ ಡಾ. ಆಳ್ವ, ಹದಿಹರೆಯದ ವ್ಯಕ್ತಿಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇರುತ್ತದೆ. ಅಂಥ ದಿನಗಳಲ್ಲಿ ರೋಗಕ್ಕೆ ಹೆದರಿ ಅವರನ್ನು ಮನೆಯಲ್ಲಿ ಬಂಧಿಯಾಗಿಸುವುದು ಸರಿಯಲ್ಲ. ವೈರಸ್ ವಿರುದ್ಧ ಹೋರಾಡಬೇಕು. ರೋಗ ಬಂದಲ್ಲಿ ಸೂಕ್ತ ಚಿಕಿತ್ಸೆ ಮಾಡಬೇಕು ಎಂದರು.

ರೋಗಪೀಡಿತರನ್ನು ಮಾನವೀಯ ನೆಲೆಯಿಂದ ನೋಡಿಕೊಳ್ಳಬೇಕು ಎಂದು ವೈದ್ಯರಿಗೆ ಸಲಹೆ ನೀಡಿದ ಡಾ. ಆಳ್ವ, ಕೊರೊನಾ ಪೀಡಿತರಾಗಿ ಸಾವನ್ನಪ್ಪಿದವರನ್ನು ನಿರ್ವಹಿಸಿದ ಪರಿ, ಅವರ ಚಿಕಿತ್ಸೆ ಸಂದರ್ಭದಲ್ಲಿ ನಡೆದುಕೊಂಡ ಬಗೆ ಇತ್ಯಾದಿಗಳು ಮಾನವೀಯತೆಗೇ ಸವಾಲಾಗಿವೆ ಎಂದರು.

ಕೊರೊನಾದಿಂದಾಗಿ ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕತೆಯ ನಷ್ಟವಾಗಿದ್ದು, ಅದನ್ನು ಭರಿಸುವುದು ಸಾಧ್ಯವಿಲ್ಲ ಎಂದವರು ನೊಂದು ನುಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!