Monday, July 4, 2022
Home ಲೋಕಾಭಿರಾಮ ಕ್ಯಾನ್ಸರ್ ಜಾಗೃತಿ ಸಪ್ತಾಹ

ಕ್ಯಾನ್ಸರ್ ಜಾಗೃತಿ ಸಪ್ತಾಹ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗ ಆಶ್ರಯದಲ್ಲಿ ಗರ್ಭಾಶಯದ ಕೊರಳಿನ ಕ್ಯಾನ್ಸರ್ ಹಾಗೂ ಸ್ತನ ಕ್ಯಾನ್ಸರ್ ಉಚಿತ ತಪಾಸಣೆ ಹಾಗೂ ಜಾಗೃತಿ ಸಪ್ತಾಹ ಈಚೆಗೆ ನಡೆಯಿತು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಕಿ ಹಾಗೂ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ಮಮತಾ ಕೆ. ವಿ. ಉದ್ಘಾಟಿಸಿದರು.

ಮಹಿಳೆಯರು ನಿಯಮಿತವಾಗಿ ತಪಾಸಣೆಗೆ ಒಳಗಾಗುವುದರಿಂದ ಆರಂಭಿಕ ಹಂತದಲ್ಲಿ ರೋಗವನ್ನು ಪತ್ತೆಹಚ್ಚಿ, ಸುಲಭ ಚಿಕಿತ್ಸೆ ಸಾಧ್ಯವಾಗುತ್ತದೆ ಎಂದರು.

ಶಿಬಿರ ಪ್ರಾಯೋಜಕರಾದ ಎಲ್.ಐ.ಸಿ ಉಡುಪಿ ವಿಭಾಗದ ಹಿರಿಯ ವಿಭಾಗಾಧಿಕಾರಿ ಬಿಂದು ರೋಬರ್ಟ್, ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದರು.

ಎಲ್.ಐ.ಸಿ. ಮಾರ್ಕೆಟಿಂಗ್ ಮ್ಯಾನೇಜರ್ ವೆಂಕಟರಮಣ ಶಿರೂರು ಎಲ್.ಐ.ಸಿ.ಯ ಜೀವನ ಆರೋಗ್ಯ ವಿಮೆ ಬಗ್ಗೆ ಮಾಹಿತಿ ನೀಡಿದರು.

ಸ್ನಾತಕೋತ್ತರ ವಿಭಾಗದ ಡೀನ್ ಡಾ. ನಿರಂಜನ ರಾವ್, ಆರೋಗ್ಯ ವಿಮೆ ವ್ಯವಸ್ಥಾಪಕ ಮೋಹನದಾಸ್, ಎಲ್.ಐ.ಸಿ ಉಡುಪಿಯ ಉಷಾ ಶೆಟ್ಟಿ, ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗದ ಆರ್.ಎಮ್.ಓ ಡಾ. ವೀಣಾ ಮಯ್ಯ, ಸಹಪ್ರಾಧ್ಯಾಪಕಿ ಡಾ. ಸುಚೇತ ಕುಮಾರಿ, ಸಹಾಯಕ ಪ್ರಾಧ್ಯಾಪಕರಾದ ಡಾ. ಅರ್ಪಣ ಜೈನ್, ಡಾ. ರೇಶ್ಮ ಇದ್ದರು.

ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ವಿಭಾಗ ಪ್ರಾಧ್ಯಾಪಕಿ ಡಾ. ರಮಾದೇವಿ ಜಿ. ಸ್ವಾಗತಿಸಿ, ಸಹಪ್ರಾಧ್ಯಾಪಕಿ ಡಾ. ವಿದ್ಯಾ ಬಲ್ಲಾಳ್ ಕೆ. ವಂದಿಸಿದರು. ಸ್ನಾತಕೋತ್ತರ ವಿದ್ಯಾರ್ಥಿನಿಯರಾದ ಡಾ. ಧರಿತ್ರಿ ಹಾಗೂ ಡಾ. ಅದ್ರಿಜ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!